ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

20ark4
Published on

ಅರಕಲಗೂಡು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.


ಪಕ್ಷದ ಧ್ವಜ ಹಿಡಿದು ಅನಕೃ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಿಹಿ ಹಂಚಿ, ಪಟಾಕಿ ಸಿಡಿಸಿದರಲ್ಲದೆ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಪಪಂ ಸದಸ್ಯರಾದ ಸುಬಾನ್ ಷರೀಪ್, ಅಬ್ದುಲ್ ಬಾಸಿತ್ ಮುಖಂಡರಾದ ಸಲೀಂ ಅಹಮದ್, ಗುರುಮೂರ್ತಿ ಪಾಲ್ಗೊಂಡಿದ್ದರು.


ಸಿದ್ದರಾಮಯ್ಯ ಅಭಿಮಾನಿ ಬಳಗ: ಸಮೀಪದ ಶಂಭುನಾಥಪುರದ ಸಿದ್ದರಾಮಯ್ಯ ಅಭಿಮಾನಿ ಬಳಗದ ಸದಸ್ಯರು ಸಿದ್ದರಾಮಯ್ಯ ಸಂಭ್ರಮಾಚರಣೆ ನಡೆಸಿದರು. ಅನಕೃ ವೃತ್ತದಲ್ಲಿ ಜಮಾಯಿಸಿ ಅನಕೃ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಸಿಹಿ ವಿತರಿಸಿ, ಪಟಾಕಿ ಸಿಡಿಸಿ, ನಾಯಕರಪರ ಘೋಷಣೆ ಕೂಗಿ ಸಂಭ್ರಮಿಸಿದರು. ವಕೀಲರಾದ ಕೃಷ್ಣ, ಮುಖಂಡರಾದ ಮಹೇಶ್, ಗಂಗಾಧರ್, ರಾಜಣ್ಣ, ಸಂದೀಪ್, ಶಿವರಾಜ್ ಇದ್ದರು.


ತಾಲೂಕಿನ ರಾಮನಾಥಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net