ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು

bkt-25-16
Published on

ಬಾಗಲಕೋಟೆ: 1975ರ ತುರ್ತು ಪರಿಸ್ಥಿತಿ ಭಾರತೀಯ ಆಡಳಿತ ಮತ್ತು ಪ್ರಜಾಪ್ರಭುತ್ವದ ಸಂಘರ್ಷವಾಗಿತ್ತು, ಇಂಥ ಕರಾಳದಿನಕ್ಕೆ ಕಾರಣವಾದ ಕಾಂಗ್ರೆಸ್ಸ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿದೆ, ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಮಂಗಳವಾರ ಬಸವೇಶ್ವರ ಸರ್ಕಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆಯ ಮತಕ್ಷೇತ್ರದಿಂದ ಹಮ್ಮಿಕೊಂಡ "ತುರ್ತು ಪರಸ್ಥಿತಿಯ ಕರಾಳ ದಿನ "(ಆಗಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಭಾರತ ದೇಶದ ಪ್ರಜಾಪ್ರಭುತ್ವ ಕಗ್ಗೋಲೆಯಾದ ದಿನ.) ಈ ದಿನವನ್ನು ಕರಾಳ ದಿನವನ್ನು ವಿರೋಧಿಸಿ ನಡೆದ ಪ್ರತಿಭಟಣೆಯಲ್ಲಿ ಮಾತನಾಡಿದರು.

ಇಂದಿಗೆ 49 ವರ್ಷಗಳ ಹಿಂದೆ ಸಂವಿಧಾನದ ಮತ್ತು ಸಂವಿಧಾನ ರಚನಾಕಾರರ ಆಶಯ ಸೋತು ಹೋಗಿತ್ತು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ಅಂದು ಜೂನ್ 25.1975 ರಂದು ಪ್ರಧಾನಮಂತ್ರಿಯೊಬ್ಬರ ಅಧಿಕಾರದ ಉಳಿವಿಗಾಗಿ ಸಂವಿಧಾನ ಸೋತಿತ್ತು, ಪ್ರಜೆಗಳು ಸೋತಿದ್ದರು, ಹಕ್ಕುಗಳು ಅಸ್ತಿತ್ವವನ್ನು ಕಳೆದುಕೊಂಡಿದ್ದವು, ಇಂಥ ಕರಾಳದಿನಕ್ಕೆ ಕಾರಣವಾದ ಕಾಂಗ್ರೆಸ್ಸ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿದೆ, ಇದರ ಬಗ್ಗೆ ತಮಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಜೂನ್ 12.1975 ರಂದು ಅಲಹಾಬಾದ ಹೈಕೋರ್ಟ ನ್ಯಾಯಾಧೀಶರಾದ ಜಗನಮೋಹನ್ ಲಾಲ್ ಸಿನ್ಹಾ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರ ಚುನಾವಣಾ ದಾವೆಯನ್ನು ಪರಿಶೀಲಿಸಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಿದರು. ಅಲ್ಲದೆ ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೂ ನಿಲ್ಲಾಬಾರದೆಂದು ಅದೇಶ ನೀಡಿದರು. ಇಂಥದೊಂದು ನ್ಯಾಯಾಂಗ ಆದೇಶದ ವಿರುದ್ದ ತಮ್ಮನ್ನು ತಾವು ರಕ್ಷಸಿಕೊಳ್ಳು ಸಾಂವಿಧಾನಿಕ ನಿಯಮಗಳನ್ನೇ ಬುಡಮೇಲು ಮಾಡಿದ್ದು ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಅತ್ಯಂತ್ಯ ಕರಾಳ ಅಧ್ಯಾಯ. ಹೈಕೋರ್ಟ ಆದೇಶ ವಿರುದ್ದ ಸುಪ್ರೀಂಕೋರ್ಟ ಕದ ತಟ್ಟಿದ್ದ ಇಂದಿರಾ ಗಾಂಧಿ ಅವರಿಗೆ ಜೂನ್ 24.1975 ರಂದು ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ಷರತ್ತುಬದ್ದ ತಡೆ ಒಡ್ಡಿ, ಸಂಸತ್ತಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶವಿತ್ತಿದ್ದರು. ಅದರ ಬೆನ್ನಲ್ಲೇ ಜೂನ್ 25 ತಡರಾತ್ರಿಯಲ್ಲಿ ತುರ್ತು ಪರಿಸ್ಥಿತಿ ಎಂಬ ಸಂವಿಧಾನದ ಜಾಗೃತಿಕ ಶಕ್ತಿ ತಂಡವನ್ನು ಕೇವಲ ಅಧಿಕಾರದ ಉಳಿವಿಗಾಗಿ ರಾಷ್ಟçದ ಮೇಲೆ ಹೇರಲಾಯಿತು.

ಈ ಕರಾಳ ತುರ್ತು ಪರಿಷ್ಥಿತಿಯಲ್ಲಿ ದೇಶದಲ್ಲಿ ವಿರೋಧ ಪಕ್ಷದ ಮಹಾನ ನಾಯಕರು ಸೇರಿದಂತೆ ಬಾಗಲಕೊಟೆಯ ಎಚ್.ಬಿ.ಕತ್ತಿ, ಗಣಪತರಾವ ಕಾಂಬಳೆ, ಈರಪ್ಪನ್ನ ವಡತಲೆ, ವಿ.ಎಸ್.ಕುಲಕರ್ಣಿ, ನಂದಲಾಲ ಭಟ್ಟಡ, ಪ್ರಲ್ಹಾದ್ ಬುರ್ಲಿ, ತುಕಾರಾಮ ಸುಲಾಖೆ, ಲೀಲಾಧರ ತಿವಾರಿ, ಜ್ಯೋತಿ ಪ್ರಕಾಶ ಸಾಳುಂಕೆ, ಕಾಶಿನಾಥ ನಾವಲಗಿ.ವಿಜಯ ನಾವಲಗಿ, ರಂಗನಾಥ ಶಿಂಧೆ,ಪ್ರಕಾಶ ಕಿಖರ,ಮನೋಹರ ಸುರ್ಯವಂಶಿ, ವಾಸುದೇವ ಪೂಜಾರ ಇವರೆಲ್ಲಾ ತುರ್ತುಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದವರು ಹೇಳಿದರು.

ಮಾಜಿ ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಟಿ ಅವರು ತುರ್ತು ಪರಿಸ್ಥಿಯ ಕರಾಳ ದಿನ ಬಗ್ಗೆ ತಿಳಿಸಿದರು. ಬಸವರಾಜ ಯಂಕಂಚಿ, ಲಕ್ಷ್ಮೀ ನಾರಾಯಣ ಕಾಸಟ್, ಡಾ.ಎಂ.ಎಸ್.ದಡ್ಡೆನ್ನವರ. ಬಸಲಿಂಗಪ್ಪ ನಾವಲಗಿ, ಅಶೋಕ ಲಿಂಬಾವಳಿ,ಗುಂಡುರಾವ ಶಿಂಧೆ, ಕುಮಾರ ಯಳ್ಳಿಗುತ್ತಿ, ಮಹಾಂತೇಶ ಸಂಗಮ, ವೀರಣ್ಣ ಹಳೆಗೌಡರ, ನಗರಸಭೇ ಸದಸ್ಯರಾದ ಜ್ಯೋತಿ ಭಜಂತ್ರಿ, ರೇಖಾ ಕಲಬುರ್ಗಿ, ಶೈಲಜಾ ಸಂಗಳದ, ಬಸವರಾಜ ಹುನಗುಂದ,ಉಮೇಶ ಹಂಚಿನಾಳ, ಶ್ರೀದರ ನಾಗರಬೇಟ್ಟ, ಸುರೇಶ ಮಜ್ಜಗಿ,ರಾಜು ಸಿಂತ್ರೆ, ಯಲ್ಲಪ್ಪ ನಾರಾಯಣಿ, ಚಂದ್ರು ರಾಮವಾಡಗಿ, ಸಿದ್ದೇಶ್ವರ ಜಿರ್ಲಿ ಸೇರದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net