ಕಸಾಪ ಕನ್ನಡಿಗರ ಹೆಮ್ಮೆ

bkt-6-4
ಬಾಗಲಕೋಟೆ ಕಸಾಪ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಸಾಪ ೧೧೧ನೇ ಸಂಸ್ಥಾಪನಾ ದಿನಾಚರಣೆ ನಿವೃತ್ತ ಉಪನಿರ್ದೇಶಕ ಎನ್.ಬಿ.ಗೊರವರ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕನ್ನಡ ಪಂಡಿತ ಎ.ಸಿ. ಚೌಕಿಮಠ, ಗುರುರಾಜ ಖಾಸನೀಸ ಸಿ.ಎಸ್. ನಾಗನೂರ, ಆನಂದ ಹಲಕುರ್ಕಿ, ಆರ್.ಸಿ. ಚಿತ್ತವಾಡಗಿ ಇತರರು ಇದ್ದರು.
Published on

ಬಾಗಲಕೋಟೆ: ಕನ್ನಡಿಗರ ಹಿತ ಕಾಪಾಡುವುದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ನೆಲ, ಜಲ ಸಂರಕ್ಷಣೆ, ಬೆಳವಣಿಗೆ ಬಗ್ಗೆ ಸದಾ ಶ್ರಮಿಸುತ್ತಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು, ಈ ಸಂಸ್ಥೆಯೊAದಿಗೆ ಎಲ್ಲರು ಕೈ ಜೋಡಿಸಬೇಕು ಎಂದು ಸಾಹಿತಿ ಸಂಗಮೇಶ ಸಣ್ಣತಂಗಿ ಹೇಳಿದರು.

ನಗರದ ಕಸಾಪ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಸಾಪ ೧೧೧ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡು ನುಡಿ ಒಳಿತಿಗಾಗಿ ವೈಶಿಷ್ಟಪೂರ್ಣ ಕಾರ್ಯಕ್ರಮ, ಸಮ್ಮೇಳನಗಳನ್ನು ಆಯೋಜಿಸಿ ಜನಸಾಮಾನ್ಯರು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಕಸಾಪ ಘಟಕಗಳಿವೆ. ದೇಶ ವಿದೇಶಗಳಲ್ಲಿಯೂ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎನ್.ಬಿ. ಗೊರವರ ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆ ಕಂಕಣ ಬದ್ಧವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹ ಕಾರ್ಯ. ಶಾಲಾ, ಕಾಲೇಜುಗಳಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಶಿಕ್ಷಕರು, ಶಾಲಾ ಮಕ್ಕಳು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಮಾತೃಭಾಷೆ ಮಹತ್ವ ಅರಿಯುವಂತೆ ಕಸಾಪ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ನೆಲ, ಜಲ, ಭಾಷೆ ಕಟ್ಟುವ ಕೆಲಸ ನಿರಂತರವಾಗಿ ನಡೆದಿದೆ. ಅಲಕ್ಷಿತ ಸಾಹಿತಿಗಳಿಗೆ, ಕಲಾವಿದರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಜಿಲ್ಲಾ, ತಾಲೂಕು ಸಮ್ಮೇಳನಗಳು, ಶಿಕ್ಷಕ-ಸಾಹಿತಿಗಳ ಸಮ್ಮೇಳನ, ವಿಭಾಗ ಮಟ್ಟದ ಸಾಂಸ್ಕೃತಿಕ ಸಮ್ಮೇಳನ ನಡೆದಿವೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳ ಸಹಯೋಗದೊಂದಿಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧೆಡೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ ೩೦ಕ್ಕೂ ಹೆಚ್ಚು ಕೃತಿಗಳನ್ನು ಜಿಲ್ಲಾ ಕಸಾಪ ಪ್ರಕಟಿಸಿದೆ ಎಂದರು.

ಶಿರೂರಿನ ಕನ್ನಡ ಪಂಡಿತ ಎ.ಸಿ. ಚೌಕಿಮಠ, ಮಹಾಲಿಂಗಪುರದ ಹಿರಿಯ ಸಾಹಿತಿ ಗುರುರಾಜ ಖಾಸನೀಸ ಅವರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಕಾರ್ಯದರ್ಶಿ ಸಿ.ಎಸ್. ನಾಗನೂರ, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಹಲಕುರ್ಕಿ, ಆರ್.ಸಿ. ಚಿತ್ತವಾಡಗಿ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಽ ಜಯಶ್ರೀ ಮುರನಾಳ, ಪಿ.ಎ. ಚೌಕಿಮಠ ಇತರರು ಇದ್ದರು. ಮ.ಕೃ.ಮೇಗಾಡಿ ನಿರೂಪಿಸಿದರು. ಪ್ರಿಯಾ ಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net