

ಶನಿವಾರಸಂತೆ: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತಿದ್ದ ಕಸದ ರಾಶಿಯ ಮೇಲೆ ಮಣ್ಣು ಸುರಿದು ಕಸದಿಂದಾಗಿ ಬರುತ್ತಿದ್ದ ದುರ್ವಾಸನೆಯನ್ನು ಶನಿವಾರ ಗ್ರಾಮ ಪಂಚಾಯಿತಿ ತಡೆದಿದ್ದು, ಕಸ ರಸ್ತೆಗೆ ಬರದಂತೆ ತಾತ್ಕಾಲಿಕ ಪರಿಹಾರ ನೀಡಿದೆ.
‘ಶನಿವಾರಸಂತೆಯಲ್ಲಿ ತ್ಯಾಜ್ಯ ಸಮಸ್ಯೆ’ ಶೀರ್ಷಿಕೆಯಡಿ ಇತ್ತೀಚೆಗೆ ವಿಜಯವಾಣಿಯಲ್ಲಿ ಸಂವಾದ ವಿಶೇಷ ವರದಿ ಪ್ರಕಟಗೊಂಡಿತ್ತು. ಇಲ್ಲಿನ ಕಸದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾತ್ರ ಸಿಕ್ಕಿದ್ದು, ಮುಂದೆ ಶಾಶ್ವತ ಪರಿಹಾರ ದೊರಕಬೇಕಿದೆ. ಮುಂದೆ ಬರುವ ನೂತನ ಗ್ರಾಪಂ ಅಧ್ಯಕ್ಷರು ಹೆಚ್ಚು ಕಾಳಜಿ ವಹಿಸಿ ಈ ಕಾರ್ಯವನ್ನು ನಿರ್ವಹಿಸಲಿ ಎಂಬುದು ಇಲ್ಲಿನ ನಾಗರಿಕರ ಒತ್ತಾಯವಾಗಿದೆ.