ಕಳ್ಳಬಟ್ಟಿ ವಶ, ಬೆಲ್ಲದ ಕೊಳೆ ನಾಶ

19KWR3
Published on

ಕಾರವಾರ: ಅಂಕೋಲಾ ತಾಲೂಕಿನಲ್ಲಿ ಭಾನುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಒಟ್ಟು 22,800 ರೂ. ಮದ್ಯ ಹಾಗೂ 3,300 ಲೀಟರ್ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಹಾರವಾಡ ಗ್ರಾಮದ ದುಮ್ಮ ಹರಿಕಂತ್ರ ಮನೆಯ ಮೇಲೆ ದಾಳಿ ನಡೆಸಿ 10.5 ಲೀಟರ್ ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ.

ವಿಮಲಾ ಹರಿಕಂತ್ರ ಅವರ ಮನೆಯಲ್ಲಿ 32.250 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಕುಸುಮಾ ಹರಿಕಂತ್ರ ಮನೆಯ ಮೇಲೆ ದಾಳಿ ನಡೆಸಿ 50 ಲೀಟರ್ ಬೆಲ್ಲದ ಕೊಳೆ ಹಾಗೂ 2 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ. ನಾಲ್ವರನ್ನೂ ಬಂಧಿಸಲಾಗಿದೆ. ಪೊಲೀಸರಿಂದ ದಾಳಿ:ಬ್ರಹ್ಮೂರು ಅಗ್ರಹಾರ ಭಾಗದಲ್ಲಿ ದಾಳಿ ನಡೆಸಿದ ಪೊಲೀಸರು ಹೊಳೆಯ ಪಕ್ಕ ಕಳ್ಳಬಟ್ಟಿ ಸಾರಾಯಿ ಅಡ್ಡೆಯನ್ನು ಗುರುತುಮಾಡಿ ನಾಶಪಡಿಸಿದ್ದಾರೆ. ಪಿಎಸ್​ಐ ಸಂಪತ್ ನೇತೃತ್ವದಲ್ಲಿ ಸಿಬ್ಬಂದಿ ಓಮು ನಾಯ್ಕ, ರೋಹಿದಾಸ, ಜಗದೀಶ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net