ಕಳ್ಳ ದಾರಿಯಿಂದ ವಿದೇಶಿಯರ ಪ್ರವೇಶ

19gkn1-a-
Published on

ಗೋಕರ್ಣ: ಕರೊನಾ ಆತಂಕದ ಕಾರಣ ವಿಭಾಗೀಯ ಅಧಿಕಾರಿಗಳು ಮಂಗಳವಾರದಿಂದ ಗೋಕರ್ಣಕ್ಕೆ ವಿದೇಶಿಯರ ಪ್ರವೇಶವನ್ನು ನಿರ್ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಊರ ಪ್ರವೇಶ ದ್ವಾರದಲ್ಲಿ ಆರೋಗ್ಯ ಇಲಾಖೆ ತಪಾಸಣೆ ಕೇಂದ್ರದಲ್ಲಿ ಪೊಲೀಸ್ ಚೆಕ್​ಪೋಸ್ಟ್ ಆರಂಭಿಸಿ ವಿದೇಶಿಯರನ್ನು ಮರಳಿ ಕಳಿಸಲಾಗುತ್ತಿತ್ತು. ಆದರೆ, ಅವರಲ್ಲಿ ಅನೇಕರು ಗೋಕ ರ್ಣ ಪ್ರವೇಶಿಸಬಹುದಾದ ಇನ್ನಿತರ ಒಳ ದಾರಿಗಳ ಮೂಲಕ ಗೋಕರ್ಣಕ್ಕೆ ಅಕ್ರಮವಾಗಿ ಬಂದಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದೆ. ದೂರಿನ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ವಿವಿಧ ಕಡೆ ತಪಾಸಣೆ ಮುಂದುವರಿಸಿದ್ದಾರೆ.

ವಿದೇಶಿಯರು ತಪಾಸಣಾ ಚೆಕ್​ಪೋಸ್ಟ್ ತಪ್ಪಿಸಿಕೊಂಡು ಅಕ್ರಮವಾಗಿ ಗೋಕರ್ಣ ಪ್ರವೇಶಿಸುತ್ತಿದ್ದಾರೆ ಎಂಬ ದೂರು ವಿಭಾಗೀಯ ಅಧಿಕಾರಿಗಳಿಗೆ ತಲುಪಿತ್ತು. ಇದನ್ನು ತಡೆಯುವುದಕ್ಕಾಗಿ ಪೊಲೀಸ್ ಚೆಕ್​ಪೋಸ್ಟ್ ಅನ್ನು ಮಾದನಗೇರಿ ಗೋಕರ್ಣ ಮುಖ್ಯ ರಸ್ತೆ ಹಿತ್ತಲಮಕ್ಕಿಗೆ ಸ್ಥಳಾಂತರಿಸಲು ವಿಭಾಗೀಯ ಅಧಿಕಾರಿಗಳು ಸೂಚಿಸಿದ್ದರು. ಹಿತ್ತಲಮಕ್ಕಿಯಲ್ಲಿ ಚೆಕ್​ಪೋಸ್ಟ್ ನಿರ್ವಿುಸಿರುವುದರಿಂದ ಮುಖ್ಯ ರಸ್ತೆ ತಪ್ಪಿಸಿ ಗೋಕರ್ಣ ಪ್ರವೇಶಿಸಬಹುದಾದ ಹೆಚ್ಚಿನ ದಾರಿಗಳು ಬಂದ್ ಆದಂತಾಗಿವೆ. ಗುರುವಾರ ಮಧ್ಯಾಹ್ನದಿಂದ ಹಿತ್ತಲಮಕ್ಕಿಯಲ್ಲಿ ಪೊಲೀಸ್ ಚೆಕ್​ಪೋಸ್ಟ್ ಪ್ರಾರಂಭವಾಗಿದೆ. ಎಲ್ಲ ಪ್ರವಾಸಿಗರಿಗೆ ನಿರ್ಬಂಧವಿರುವ ಕಾರಣ ಗುರುವಾರ ಒಂದೇ ಒಂದು ವಾಹನ ಸಮುದ್ರ ತೀರದ ಮತ್ತು ಬಸ್ ನಿಲ್ದಾಣದ ರ್ಪಾಂಗ್​ನಲ್ಲಿ ಕಂಡು ಬರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net