ಕಲ್ಲು ಕ್ವಾರಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಸಾವು

Published on

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದಿಂದ ಕಲ್ಲು ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಗಿರಿಜನ ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.


ಗ್ರಾಮದ ಸೋಲಿಗ ಸಮುದಾಯದ ಮುನಿಯಪ್ಪ (40) ಮೃತ. ಗುಂಡ ಹಾಗೂ ನಾಗ ಎಂಬುವರು ಗಾಯಗೊಂಡವರು.


ವಾರದ ಹಿಂದೆ ಗ್ರಾಮದಿಂದ ಸೋಲಿಗ ಹಾಗೂ ಇತರೆ ಸಮುದಾಯದ 30ಕ್ಕೂ ಹೆಚ್ಚು ಜನರು ತಮಿಳುನಾಡಿನ ಬರಗೂರು ಬೆಚ್ಚಲಟ್ಟಿ ಸಮೀಪದಲ್ಲಿ ನಡೆಯುತ್ತಿರುವ ಕರಿಕಲ್ಲು ಕ್ವಾರಿ ಕೆಲಸಕ್ಕೆ ಹೋಗಿದ್ದರು. ಬುಧವಾರ ಬೆಳಗ್ಗೆ ತಿಂಡಿ ತಿನ್ನುತ್ತಿದ್ದ ವೇಳೆ ಟಿಪ್ಪರ್‌ನಿಂದ ಬಂಡೆ ಉರುಳಿ ಬಿದ್ದು ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ, ಗುಂಡ ಮತ್ತು ನಾಗ ಗಾಯಗೊಂಡಿದ್ದಾರೆ.


ಮೃತ ದೇಹವನ್ನು ಗುರುವಾರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಯಿತು. ಗಾಯಗೊಂಡ ಇಬ್ಬರು ತಮಿಳುನಾಡಿನ ಹಂದಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಮಾಹಿತಿ ತಿಳಿದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net