

ಕಲಬುರಗಿ: ಈ ಭಾಗದ ರಚನಾತ್ಮಕ ಪ್ರಗತಿಗೆ ಕಾಲಮಿತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಭರವಸೆ ನೀಡಿದರು.
ನಗರದ ಐವಾನ್ ಶಾಹಿ ಅತಿಥಿ ಗೃಹ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪ್ರಮುಖರು ಮತ್ತು ತಜ್ಞರ ನಿಯೋಗದೊಂದಿಗೆ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಈ ಭಾಗದ ಅಭಿವೃದ್ಧಿಗೆ ಸಂಬAಧಿಸಿದAತೆ ೧೬ ಅಂಶಗಳ ಪ್ರಸ್ತಾವನೆ ಸಲ್ಲಿಸಿ ವಿವರಿಸಿದರು.
ಪ್ರೊ.ಆರ್.ಕೆ. ಹುಡಗಿ ಮತ್ತು ಪ್ರೊ.ಬಸವಾರಾಜ ಕುಮ್ನೂರು ಮಾತನಾಡಿ, ೩೭೧(ಜೆ) ಅಡಿ ಸ್ವಾಯತ್ತ ಪಡೆದಿರುವ ಮಂಡಳಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕಾಲಮಿತಿಯೊಳಗೆ ವೈಜ್ಱಆನಿಕ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಮನೀಷ ಜಾಜು, ದತ್ತಾತ್ರೇಯ ಇಕ್ಕಳಕ್ಕಿ, ಡಾ.ಮಾಜಿದ್ ಡಾಗಿ, ಕಲ್ಯಾಣರಾವ ಪಾಟೀಲ್, ಜಾನಮಿತ್ರ ಸ್ಯಾಮುವೆಲï, ಶಿವಲಿಂಗಪ್ಪ ಭಂಡಕ್, ಬಿ.ಬಿ. ನಾಯಕ್, ವಿಶ್ವನಾಥ ಪಾಟೀಲ್ ಗೌನಳ್ಳಿ , ಸಂಧ್ಯಾರಾಜ ಸ್ಯಾಮುವೆಲ್, ಮಲ್ಲಿನಾಥ ಸಂಘಶೆಟ್ಟಿ, ರಾಜು ಜೈನ್, ಅಬ್ದುಲï ಖದೀರ್, ಸಾಬೀರ್ ಅಲಿ, ಪರಮೇಶ್ವರ್, ಶರಣಬಸಪ್ಪ ಕೆ. ಇತರರಿದ್ದರು.
೧೬ ಅಂಶಗಳ ಪ್ರಸ್ತಾವನೆ: ಮಂಡಳಿಯಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಐದು ವರ್ಷದ ಗುರಿಯೊಂದಿಗೆ ವೈಜ್ಞಾನಿಕ ಕ್ರಿಯಾಯೋಜನೆ ರೂಪಿಸುವುದು. ಡಾ.ನಂಜುಂಡಪ್ಪ ವರದಿ ಮಾನದಂಡವಾಗಿರಿಸಿ ಒಂದು ಗ್ರಾಮ ಪಂಚಾಯಿತಿ ಘಟಕ ಮಾಡಿ ಕಲ್ಯಾಣದ ವರದಿ ರಚಿಸಬೇಕು. ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕು. ಮಂಡಳಿಗೆ ಮಂಜೂರಾಗುವ ಅನುದಾನ ಆಯಾ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಖರ್ಚಾಗಬೇಕು. ಮಂಡಳಿ ಅಡಿ ಮೇಲ್ವಿಚಾರಣಾ ಸಮಿತಿ, ಮೌಲ್ಯಮಾಪನ ಸಮಿತಿ, ಜಾಗೃತ ದಳ ಸಮಿತಿ (ವಿಜಿಲೆನ್ಸ್ ಕಮಿಟಿ) ಹೀಗೆ ಮೂರು ಸಮಿತಿ ರಚಿಸಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಆಯಾ ಕ್ಷೇತ್ರದ ಪರಿಣತರನ್ನು ಮಂಡಳಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು. ಕಲ್ಯಾಣದ ಏಳು ಜಿ¯್ಲೆಗಳ ಎಲ್ಲ ಕ್ಷೇತ್ರಗಳ ೩೫-೫೦ ಚಿಂತಕರ ಸಲಹಾ ಸಮಿತಿ ರಚಿಸಿ ವರ್ಷದಲ್ಲಿ ಎರಡು ಸಭೆ ಮಾಡಬೇಕು. ಗುಣಮಟ್ಟದ ಕಾಮಗಾರಿ ನಡೆಯುವ ನಿಟ್ಟಿನಲ್ಲಿ ನಿಗಾ ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮಂಜೂರಾಗುವ ಹಣದಲ್ಲಿ ಲೋಪ, ಅವ್ಯವಹಾರ, ಭ್ರಷ್ಟಾಚಾರ ನಡೆದರೆ ಸಂಬAಧಿತರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸಿಎಂ ನೇತೃತ್ವದಲ್ಲಿ ಮಂಡಳಿ ಸಭೆ ವರ್ಷಕ್ಕೊಮ್ಮೆಯಾದರೂ ನಡೆಸಬೇಕು ಎಂಬುದು ೧೬ ಅಂಶಗಳ ಪ್ರಸ್ತಾವನೆಯಾಗಿದೆ.