ಕಲೆಗಳು ಮನಸ್ಸಿಗೆ ಧನಾತ್ಮಕ ಭಾವ ತುಂಬುತ್ತವೆ

bkt-24-2
ಬಾಗಲಕೋಟೆ ನಗರದ ಕಲಾಭವನ ಆವರಣದಲ್ಲಿ ಆರ್ಟ್ ಪಾರ್ಕ್ ೮೧ ನೇ ಆವೃತ್ತಿಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಚಿತ್ರ ಬಿಡುಸುವ ಮೂಲಕ ಚಾಲನೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಡಾ.ಗಿರೀಶ ಮಾಸೂರಕರ, ರಾಜು ಚಿತ್ತವಾಡಗಿ, ಬೆಂಗಳೂರಿನ ಹಿರಿಯ ಕಲಾವಿದ ಜಯಕುಮಾರ ಇತರರು ಇದ್ದರು.
Published on

ಬಾಗಲಕೋಟೆ: ಕನ್ನಡ ಕಲೆಗಳು ಮಾನವನ ಸೃಜನಶೀಲ ಕಲೆಯಾಗಿದ್ದು, ನಮ್ಮ ಕಲಾವಿದರಿಂದ ಕನ್ನಡ ಸಂಸ್ಕೃತಿ ಬೆಳೆದು ಶ್ರೀಮಂತವಾಗಿದೆ, ಭಾರತೀಯ ವಿವಿಧ ಕಲೆಗಳಲ್ಲಿ ಹೃದಯ ಮತ್ತು ಮನಸ್ಸಿನ ಭಾವನೆಗಳನ್ನು ಅರಳಿಸುವ ಸಾಮರ್ಥ್ಯವಿದ್ದು, ಆ ಕಲೆಗಳು ಮನಸ್ಸಿಗೆ ಧನಾತ್ಮಕ ಭಾವವನ್ನು ತುಂಬುತ್ತವೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ ಹೇಳಿದರು.

ನವನಗರದ ಕಲಾಭವನ ಆವರಣದಲ್ಲಿ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಆಟ್ ಪಾರ್ಕ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ೮೧ ನೇ ಆವೃತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾವಿದರ ಕಲೆಗಳನ್ನು ನೋಡುವ, ವಿಕ್ಷೀಸುವ ಅವಕಾಶ ಇದೆ. ನಮ್ಮ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು. ಎಲ್ಲರೂ ಕಲಾ ಅಭಿರುಚಿಯನ್ನು ಬೆಳೆಸಿಕೊಂಡು ಕಲಾವಿದರನ್ನು ಪೋಷಿಸುವದರೊಂದಿಗೆ ನಮ್ಮ ಕಲೆಗಳು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಕಲೆಗಳಿಗೆ ಬೆಲೆ ಇರುವುದರಿಂದ ನಮ್ಮ ಕಲಾಕೃತಿಗಳು ಆಂದೋಲನವಾಗಿ ಪ್ರಸಾರವಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಬೆಂಗಳೂರು ಆರ್ಟ್ ಪಾರ್ಕ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಮ್ಮ ಜಿಲ್ಲೆಯ ಕಲಾವಿದರಿಗೆ, ಸಾಹಿತಿಗಳಿಗೆ ಸೂಕ್ತವಾದ ಸ್ಥಾನಮಾನ ನೀಡಿ ಗೌರವಿಸುತ್ತಿದೆ ಎಂದು ಹೇಳಿದರು.

ಡಾ.ಗಿರೀಶ ಮಾಸೂರಕರ, ರಾಜು ಚಿತ್ತವಾಡಗಿ, ಬೆಂಗಳೂರಿನ ಹಿರಿಯ ಕಲಾವಿದ ಜಯಕುಮಾರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಂಚಾಲಕರಾದ ವಿರೇಶ ರುದ್ರಸ್ವಾಮಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಚಂದ್ರಶೇಖರ ಕಾಳನ್ನವರ, ಸಾಹಿತಿ ಲಲಿತಾ ಹೊಸಪ್ಯಾಟಿ, ಆರ್.ಸಿ.ಚಿತ್ತವಾಡಗಿ, ಕತೆಗಾರ ಲಕ್ಷ÷್ಮಣ ಬಾದಾಮಿ, ವಿಜಯಶ್ರೀ ಮುರನಾಳ, ಡಾ.ಲೋಕಣ್ಣ ಭಜಂತ್ರಿ, ಪವಿತ್ರಾ ಜಕ್ಕಪ್ಪಣವರ ಸೇರಿದಂತೆ ಕಲಾವಿದರು, ಸಾಹಿತಿಗಳು ಪಾಲ್ಗೊಂಡಿದ್ದರು. ತಮ್ಮಣ್ಣ ನಾಯಕ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಲಕ್ಷ÷್ಮಣ ಬಾದಾಮಿ ಸ್ವಾಗತಿಸಿದರು. ಆರ್.ಸಿ.ಚಿತ್ತವಾಡಗಿ ವಂದಿಸಿದರು, ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net