ಕಲುಷಿತ ನೀರು ಸೇವನೆ ಪ್ರಕರಣ, ವಾಟರ್ ಆಡಿಟ್ ಕಮಿಟಿ ರಚನೆ: ಸಚಿವ ಪ್ರಿಯಾಂಕ್ ಹೇಳಿಕೆ

Priyank Kharge
Published on

ಕಲಬುರಗಿ : ಇತ್ತೇಚೆಗೆ ಚಿತ್ರದುರ್ಗ, ಮೊನ್ನೆ ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆರ್.ಡಿ.ಪಿ.ಆರ್. ಇಲಾಖೆಯಿಂದ ಆರ್.ಓ.ಪ್ಲ್ಯಾಂಟ್ ಸೇರಿದಂತೆ ಇತರೆ ನೀರು ಕುಡಿಯಲು ಯೋಗ್ಯ ಇರುವ ಕುರಿತು ಅಧ್ಯಯನಕ್ಕೆ "ವಾಟರ್ ಆಡಿಟ್ ಕಮಿಟಿ" ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಂಡವು ಅಧ್ಯಯನ ನಡೆಸಿ ಒಂದು ತಿಂಗಳ ಒಳಗಾಗಿ ವರದಿ ನೀಡಲಿದೆ. ನಂತರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಲ್ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಕಡೆ ಕಾಮಗಾರಿ ಕಳಪೆಯಾಗಿಲ್ಲ. ಕೆಲವು ಕಡೆ ಆಗಿದ್ದು, ಮೂರನೇ ತಂಡದಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net