ಕಲಿಕಾ ಸುಧಾರಣೆಗೆ ತರಬೇತಿ ಅಗತ್ಯ

bkt-13-5
Published on

ಬಾಗಲಕೋಟೆ: ಮಕ್ಕಳ ಬೆಳವಣಿಗೆ ಹಾಗೂ ಕಲಿಕಾ ಸುಧಾರಣೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ ಹೇಳಿದರು.

ವಿದ್ಯಾಗಿರಿ ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಅಜೀಮ್ ಪ್ರೇಮಜಿ ಪೌಂಡೇಷನ್ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಶಾಲಾ ಪೂರ್ವ ಚಟುವಟಕೆ ಆಧಾರಿತ ಬಾಗಲಕೋಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡ ಹೊಂಗಿರಣ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಪೂರ್ವ ಶಿಕ್ಷಣದ ಕೊರತೆ ಇರುವುದನ್ನು ಕಂಡುಬಂದಿತ್ತು. ಇದನ್ನು ಮನಗಂಡು ತರಬೇತಿ ಅಗತ್ಯತೆಯನ್ನು ತಿಳಿದು ಅಜೀಮ್ ಪ್ರೇಮಜಿ ಪೌಂಡೇಷನ್ ಮೂಲಕ ತರಬೇತಿ ಕೊಡಿಸಲು ಮುಂದಾಗಿರುವುದಾಗಿ ತಿಳಿಸಿದರು. ಕಾರ್ಯಕರ್ತೆಯರಲ್ಲಿ ಸಮಯದ ಪಾಲನೆ ಮುಖ್ಯವಾಗಿದ್ದು, ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಅಂಗನವಾಡಿ ಕೇಂದ್ರದಲ್ಲಿ ಇರಬೇಕು ಅಂದಾಗ ಮಾತ್ರ ಮಕ್ಕಳು ಸಹ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಇದರಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ಅಜಿಮ್ ಪ್ರೇಮ್‍ಜಿ ಪೌಂಡೇಷನ್ ವಿವಿಧ ವಿಷಯ ಆಧಾರಿತದ ಮೇಲೆ ಕ್ರಿಯಾತ್ಮ ಚಟುವಟಿಕೆ, ಕ್ರೀಯಾತ್ಮಕ ಅಭಿವೃದ್ದಿ, ದೈಹಿಕ, ಭಾಷಾ ಅಭಿವೃದ್ದಿಯ ಬಗ್ಗೆ ತರಬೇತಿ ನೀಡಿದ್ದಾರೆ. ತರಬೇತಿಯಿಂದ ಇಷ್ಟೊಂದು ಚಟುವಟಿಕೆಗಳನ್ನು ಮಾಡಿರುವುದನ್ನು ನೋಡಿದರೆ ತರಬೇತಿ ಪೂರ್ಣ ಪ್ರಮಾಣದಲ್ಲಿ ಆಗಿದೆ ಎಂದು ಭಾವಿಸಬಹುದಾಗಿದೆ. ತರಬೇತಿ ಪಡೆದ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರಗಳನ್ನು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಲು ತಿಳಿಸಿದರು.

ಅಜಿಮ್ ಪ್ರೇಮ್‍ಜಿ ಪೌಂಡೇಷನ್‍ನದ ತರಬೇತಿದಾರರ ಗುರುನಾಥ ಗೌಡರ ಮಾತನಾಡಿ ಅಂಗನವಾಡಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಮಾಡಲು ಆ ಕೇಂದ್ರದಲ್ಲಿ ಏನೆಲ್ಲ ಇರಬೇಕು ಎಂಬುದನ್ನು 6 ಹಂತಗಳಲ್ಲಿ ತರಬೇತಿ ಮೂಲಕ ತಿಳಿಸಿಕೊಡಲಾಗಿದೆ. 300ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದು, ತಂಡವಾಗಿ ಮಾಡಿ ತಮಗೆ ತರಬೇತಿ ನೀಡಿರುವುದಾಗಿ ತಿಳಿಸಿದರು.

ಮುಖ್ಯವಾಗಿ ಕಥೆ ಹೇಳ್ತಿವಿ ಕಥೆ, ಆರೋಗ್ಯವೇ ಭಾಗ್ಯ, ನನ್ನ ಕೇಂದ್ರ-ನನ್ನ ಹೆಮ್ಮೆ, ಯೋಚಿಸಿ ರಚಿಸಿ, ಗೊಂಬೆ ಮನೆ, ಆಟ ಹಾಗೂ ಅಭಿನಯ ಗೀತೆಯ ಮೂಲಕ ಮಕ್ಕಳನ್ನು ಕಲಿಕೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂಬುದನ್ನು ತರಬೇತಿ ಮೂಲಕ ತಿಳಿಸಲಾಗಿದೆ. ಇವೇಲ್ಲ ಅಂಶಗಳನ್ನು ಇಟ್ಟುಕೊಂಡು ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ಮಾಡುವ ಜವಾಬ್ದಾರಿ ಕಾರ್ಯಕರ್ತೆಯರದ್ದಾಗಿದೆ ಎಂದು ತಿಳಿಸಿದರು.

ತರೆಬೇತಿಯಲ್ಲಿ ಪಾಲ್ಗೊಂಡು ತರಬೇತಿ ಕುರಿತು ಅಂತನವಾಡಿ ಕಾರ್ಯಕರ್ತೆಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಾಗಲಕೋಟೆ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net