ಕಲಾವಿದರಿಗೆ ನ್ಯಾಯ ಒದಗಿಸಿ

bkt-10-6
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಕಲಾವಿದರ ಪ್ರತಿಭಟನೆ ನಡೆಸಿದರು. ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಲಕ್ಷ್ಮೇಶ್ಚರ ಶ್ವರ, ಮುಖಂಡರಾದ ಪವಿತ್ರ ಜಕ್ಕಪ್ಪನವರ. ಲೋಕಣ್ಣ ಪೂಜಾರಿ, ಶಂಕರ ತಂಬಾಕದ, ಹನುಮಂತ ಹಡಪದ, ಮರಗವ್ವ ಜುನ್ನಪ್ಪನವರ, ಯುವರಾಜ ಪರದೇಶ ಇತರರು ಇದ್ದರು.
Published on

ಬಾಗಲಕೋಟೆ: ಸರ್ಕಾರಿ ಯೋಜನೆಗಳು ನೀಡುವಾಗ ಕಲಾವಿದರಿಗೆ ತಾರತಮ್ಯ ಮಾಡಬಾರದು, ಕಲಾವಿದರಿಗೆ ನ್ಯಾಯ ಒದಗಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಸೋಮವಾರ ಕಲಾವಿದರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದರು.

ರಾಜ್ಯವು ಜನಪದ ಸಂಸ್ಕೃತಿಯ ನಾಡು. ಇಲ್ಲಿನ ಕಲಾವಿದರು ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ನೆಲ, ಜಲಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಜಿಲ್ಲೆಯ ಕಲಾವಿದರು ಕಲೆ ಉಳುವಿಗಾಗಿ ಜೀವ ಪಣಕ್ಕೆ ಇಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ದರ್ಪಕ್ಕೆ ಕಲಾವಿದರು ತತ್ತರಿಸಿ ಹೋಗಿದ್ದಾರೆ. ಮಹಿಳಾ ಕಲಾವಿದರಿಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಎರಡು ವರ್ಷದಿಂದ ಕಲಾವಿದರಿಗೆ ತಾರತಮ್ಯೆ ನೀತಿ ಅನುಸರಿಸುತ್ತಿದ್ದಾರೆ. ಕಲಾವಿದರನ್ನು ಏಜೆಂಟರು, ಬ್ರೋಕರು ಅಂತ ನಿಂದಿಸುತ್ತಿದ್ದಾರೆ. ಸೌಜನ್ಯಕ್ಕೂ ಮಾತನಾಡುವದಿಲ್ಲ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ‍್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ವೃತ್ತಿಪರ ಕಲಾವಿದರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಲಾವಿದರಿಗಾಗಿ ಬಿಡುಗಡೆಯಾದ ಅನುದಾನ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಕಲಾವಿದರಿಗೆ ನೀಡಿದ ಪ್ರಾಯೋಜಕತ್ವದ ಗೌರವ ಸಂಭಾವಣೆ ಒದಗಿಸಿಕೊಡಬೇಕು. ಕಲಾವಿದರೊಂದಿಗೆ ಸೌಜನ್ಯದಿಂದ ವರ್ತಿಸುವ ಅಽಕಾರಿಯನ್ನು ನೇಮಕ ಮಾಡಬೇಕು. ಜಿಲ್ಲೆಯ ಕಲಾವಿದರನ್ನು ಗುರುತಿಸಿ ಇಲಾಖೆಯಿಂದ ಗೌರವಿಸಬೇಕು. ಸಂಸ್ಕೃತಿ ಸೌರಭ, ಜನಪರ ಉತ್ಸವ, ಗಿರಿಜನ ಉತ್ಸವ, ಚಿಗುರು, ಯುವ ಸೌರಭ ಸೇರಿದಂತೆ ವಿವಿಧ ಶರಣರ ಜಯಂತಿಗಳಲ್ಲಿ ಅವಕಾಶ ವಂಚಿತ ಕಲಾವಿದರಿಗೆ ಕಾರ್ಯಕ್ರಮ ನೀಡಬೇಕು. ಪ್ರತಿ ವರ್ಷ ಹಿರಿಯ ಕಲಾವಿದರಿಗೆ ಮಾಶಾಸನ ಅರ್ಜಿ ಪ್ರತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ರಾಜ್ಯ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಮುಖಂಡರಾದ ಪವಿತ್ರ ಜಕ್ಕಪ್ಪನವರ. ಲೋಕಣ್ಣ ಪೂಜಾರಿ, ಶಂಕರ ತಂಬಾಕದ, ಹನುಮಂತ ಹಡಪದ, ಮರಗವ್ವ ಜುನ್ನಪ್ಪನವರ, ಯುವರಾಜ ಪರದೇಶ. ಬಸವರಾಜ ಭಜಂತ್ರಿ, ಗಿರಿಜಮ್ಮ ಘಂಟಿ. ವಿಷ್ಣು ಹುಚ್ಚಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net