

ಬಾಗಲಕೋಟೆ: ಸರಣಿ ಕಳ್ಳತನ, ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಽಸಿ ೧೧೪ ಗ್ರಾಮಂ ಚಿನ್ನಾಭರಣ, ಒಂದು ಬೈಕ್ ಸೇರಿ ೯.೪೯.೨೦೦ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲೆಯ ಕಲಾದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಂಗಾಧರ ಇಂಗಳಗಿ(೩೦), ಕರಿಯಪ್ಪ ಕಲ್ಲಪ್ಪ ತಳವಾರ(೨೮) ಬಂಽತ ಆರೋಪಿಗಳು. ಜಮಖಂಡಿ ತಾಲೂಕಿನ ಹುಣಶಿಕಟ್ಟಿ ಮೂಲದವರಾದ ಇವರು ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈಚೆಗೆ ವೃದ್ಧರೊಬ್ಬರು ಗದ್ದನಕೇರಿ ಕ್ರಾಸ್‌ನಿಂದ ತಮ್ಮೂರಿಗೆ ಹೊರಟಿದ್ದರು. ನಿಮ್ಮನ್ನು ಊರಿಗೆ ಬಿಡುತ್ತಿದ್ದೇವೆ ಅಂತ ನಂಬಿಸಿ ಮೊಟೈರ್ ಬೈಕ್ ಕರೆದೊಯ್ದು ಚಿನ್ನದ ಸರ ಕದ್ದಿದ್ದರು. ಅಲ್ಲದೇ ದೇವನಾಳ ಪುನರ್ ವಸತಿ ಕೇಂದ್ರದಲ್ಲಿನ ಸರಣಿ ಮನೆಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗಿದ್ದರು.
ಸಿಪಿಐ ಎಚ್.ಆರ್.ಪಾಟೀಲ, ಪಿಎಸ್‌ಐಗಳಾದ ಸಿ.ವೈ.ಹೆರಕಲ್ಲ, ನೂರಜಾನ್ ಸಾಬರ, ಸಿಬ್ಬಂದಿಗಳಾದ ಸಿ.ವೈ.ಭಜಂತ್ರಿ, ವಿ.ಬಿ.ಮಠ, ಗದ್ದೆಪ್ಪ ಎ.ಎಂ. ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ.