ಕಲಾ ಆರಾಧಕ ಡಾ.ರಾಜ್‌ಕುಮಾರ

bkt-24-2
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜಕುಮಾರ ಅವರ ೯೭ನೇ ಜನ್ಮ ದಿನಾಚರಣೆ ಹಾಗೂ ಡಾ.ರಾಜ್ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ ವಿ.ಪ ಸದಸ್ಯ ಪಿ.ಎಚ್.ಪೂಜಾರ ಉದ್ಘಾಟಿಸಿದರು. ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಡಿಎಸ್‌ಪಿ ಮಂಜುನಾಥ ಗಂಗಲ್, ಕಸ್ತೂರಿ ಪಾಟೀಲ, ರಾಜೇಶ್ವರಿ ದೇಶಪಾಂಡೆ, ವಿನಾಯಕ ದಂಡಗಿ, ರಾಮಚಂದ್ರ ಪೂಜಾರ ಇದ್ದರು.
Published on

ಬಾಗಲಕೋಟೆ: ಕಲಾವಿದರ ಕುಟುಂಬದಲ್ಲಿ ಜನಿಸಿ ರಂಗಭೂಮಿಯಲ್ಲಿ ತನ್ನ ಪ್ರತಿಭೆ ತೋರಿಸಿ ಚಲನಚಿತ್ರದಲ್ಲಿ ಮಿಂಚಿ ದೇಶದ ಪ್ರತಿಷ್ಠಿತ ದಾದಾಸಾಹೇಬ ಫಾಲಕೆ ಪ್ರಶಸ್ತಿ ಪುರಷ್ಕೃತ ಡಾ.ರಾಜ್‌ಕುಮಾರ ಕಲಾದೇವಿ ಆರಾಧಕರಾಗಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ರಾಜಕುಮಾರ ಅವರ ೯೭ನೇ ಜನ್ಮ ದಿನಾಚರಣೆ ಹಾಗೂ ಡಾ.ರಾಜ್ ಗೀತೆಗಳ ಗಾಯನ ಸ್ಪರ್ಧೆಗೆ ಚಾಲನೆ ಮಾತನಾಡಿದ ಅವರು, ಸಿರಿವಂತ, ಬಡವ, ಬಲ್ಲಿದ, ರಾಜ-ಮಹಾರಾಜರ ಅಭಿನಯಗಳಲ್ಲಿ ಜೀವ ತುಂಬುವ ಕಾರ್ಯ ಮಾಡಿದ ರಾಜ್ ಕೇವಲ ಕಲಾವಿದನಾಗಿರಲಿಲ್ಲ. ಮಾನವೀಯತೆಯ ಮೌಲ್ಯಗಳುಳ್ಳ ವ್ಯಕ್ತಿಯಾಗಿದ್ದು, ತನ್ನ ಜೀವತಾವಽವರೆಗೂ ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಯಾವ ಭಾಷೆಯಲ್ಲಿ ನಟಿಸಿರಲಿಲ್ಲ ಎಂದರು.

ಕನ್ನಡ ಭಾಷೆಗೆ ಪ್ರಾತಿನಿಧ್ಯ ಕೊಡುವ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ನೇತೃತ್ವ ವಹಿಸಿದ್ದರು. ತಮ್ಮ ಈಡೀ ಕಲಾ ಜೀವನದಲ್ಲಿ ಸರಳ ಹಾಗೂ ಆದರ್ಶ ವಿಷಯಗಳನ್ನೊಳಗೊಂಡ ಹಾಗೂ ಪ್ರೇಕ್ಷಕರಿಗೆ ಮತ್ತು ಜನರಿಗೆ ಮಾದರಿಯಾಗುವಂತಹ ಪಾತ್ರ ನಿರ್ವಹಿಸಿ ಎಲ್ಲ ಕಲಾವಿದರ ಮನದ ಆರಾಧ್ಯ ದೈವರಾಗಿದ್ದರು. ಕೇವಲ ೩ನೇ ತರಗತಿ ಕಲಿತ ರಾಜ್‌ಕುಮಾರ ಅವರ ಕಲೆಗೆ ಗೌರವ ಡಾಕ್ಟರೇಟ್ ಅರಿಸಿ ಬರುವದಲ್ಲದೇ ರಣಽÃರ ಕಂಠಿರವ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಬಿರುದುಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಮಾತನಾಡಿ, ರಾಜಕುಮಾರ ಕಲೆಯ ಜೊತೆಗೆ ಉತ್ತಮ ಹಾಡುಗಾರರಾಗಿದ್ದರು. ಅದ್ಬುತವಾದ ಕಂಠಸಿರಿಯಿAದ ಹಾಗೂ ಸ್ಪಷ್ಟ ಕನ್ನಡ ಶಬ್ದ ಪ್ರಯೋಗದಲ್ಲಿ ಪರಿಣಿತರಾಗಿದ್ದರು. ಇವರು ನಟಿಸಿದ ಪ್ರತಿಯೊಂದ ಚಿತ್ರಗಳು ಸಮಾಜಕ್ಕೊಂದು ಸಂದೇಶ ನೀಡುತ್ತಿದ್ದವು. ಆದ್ದರಿಂದ ರಾಜ್‌ಕುಮಾರ ಒಬ್ಬ ಮಾದರಿ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ನೆಲೆಯೂರಿದ್ದರು ಎಂದರು.

ಡಿಎಸ್‌ಪಿ ಮಂಜುನಾಥ ಗಂಗಲ್ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ರಾಜ್‌ಕುಮಾರ ಅವರನ್ನು ವೀರಪ್ಪನ್ ಅಪಹರಿಸಿದ ಅಂದು ಟಿವಿ ಮಾಧ್ಯಮಗಳು ಅಷ್ಟೊಂದು ಪ್ರಚಲಿತದಲ್ಲಿ ಇರಲಿಲ್ಲ. ಅಷ್ಟಾದರೂ ಅಣ್ಣಾರವರ ಅಪಹರಣ ನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು. ಆ ಸಂದರ್ಭದಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವಾಗ ಅಭಿಮಾನಿಗಳ ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಆ ಸಂದರ್ಭದಲ್ಲಿ ಡಾ.ರಾಜ್ ಅವರ ಸರಳ ಸಜ್ಜನಿಕೆ, ಸ್ವಭಾವದ ಬಗ್ಗೆ ಜನರಿಗೆ ತಿಳಿಸಿ ಹೇಳಿದಾಗ ಅಭಿಮಾನಿಗಳು ಶಾಂತರಾಗಿದ್ದರು ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ರಾಜೇಶ್ವರಿ ದೇಶಪಾಂಡೆ, ವಿನಾಯಕ ದಂಡಗಿ, ರಾಮಚಂದ್ರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net