

ಕಲಬುರಗಿ: ನಗರದ ವಿವಿಧ ಕಡೆಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಜೇವರ್ಗಿ ಕಾಲೋನಿ ಮಠ: ರಾಯರ ಆರಾಧನೆಗೆ ಅದ್ಧೂರಿ ಚಾಲನೆ ನೀಡಲಾಯಿತು. ಬೆಳಗ್ಗೆ ಸುಪ್ರಭಾತ, ಅಕಾರ, ಪಂಚಾಮೃತಾಭಿಷೇಕ, ಶ್ರೀ ಸತ್ಯಪ್ರಮೋದತೀರ್ಥ ಕೃಪಾಪೋಷಿತ ಪಾರಾಯ ಸಂಘದ ಸದಸ್ಯರಿಂದ ಪರಾಯಣ ಹಾಗೂ ರಾಯರ ಅಷ್ಟೋತ್ತರ, ಭಜನೆ ಹಾಗೂ ಅಲಂಕಾರ ಬ್ರಾಹ್ಮಣರ ಭೋಜನ ನಂತರ ತೀರ್ಥಪ್ರಸಾರ ನಡೆಯಿತು.
ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ನರೇಂದ್ರ ಫಿರೋಜಾಬಾದಕರ್, ಕಾರ್ಯದರ್ಶಿ ಪ್ರಶಾಂತ ಕೊರಳ್ಳಿ, ವಿನಾಯಕ ಕುಲಕರ್ಣಿ, ಪವನ ಕುಲಕರ್ಣಿ, ಪ್ರಹ್ಲಾದ ಮಟಮಾರಿ ಇತರರು ಪಾಲ್ಗೊಂಡಿದ್ದರು.
ಜಯತೀರ್ಥ ನಗರದಲ್ಲಿ 108 ಬಾರಿ ಅಷ್ಟೋತ್ತರ
ಕಲ್ಬುರಗಿ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಜಯತೀರ್ಥ ನಗರದ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಶ್ರೀಲಕ್ಷ್ಮಿನಾರಾಯಣ ಮತ್ತು ಶ್ರೀಹಂಸನಾಮಕ ಪಾರಾಯಣ ಸಂಘದಿಂದ 108 ಬಾರಿ ರಾಯರ ಅಷ್ಟೋತ್ತರ ಪಟರಾಯಣ ಮಾಡಲಾಯಿತು.
ಡಾ.ಕೃಷ್ ಕಾಕಲವಾರ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಸಕಲ ಶಾಸ್ತ್ರ ಪಾರಂಗತರು ಅವರನ್ನು ಭಕ್ತಿಯಿಂದ ಪೂಜಿಸುವುದರಿಂದ ಲೌಕಿಕ ಮಾತ್ರವಲ್ಲದೆ, ವೈದಿಕ ಜ್ಞಾನ ಸಂಪತ್ತನ್ನು ಕರುಣಿಸುತ್ತಾರೆ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಮಹತ್ವವನ್ನು ತಿಳಿಸಿದರು .
ಬಡಾವಣೆಯ ಹಿರಿಯರಾದ ರವಿಲಾತೂರಕರ ,ರಾಮಾಚಾರ್ಯ ನಗನೂರ, ಅಪ್ಪಾರಾವ ಟಕ್ಕಳಕಿ, ಅರ್ಚಕ ಶ್ರೀನಿವಾಸ ಆಚಾರ್ಯ, ಜಗನ್ನಾಥ ಸಗರ,ಅನಿಲ ಕುಲಕರ್ಣಿ, ಸುರೇಶ್ ಕುಲಕರ್ಣಿ, ವಿನೂತ ಜೋಶಿ, ಲಕ್ಷ್ಮಿಕಾಂತ ಕುಲಕರ್ಣಿ, ಪ್ರವೀಣ್ ಓಂಕಾರ, ರಂಗರಾವ ಕುಲಕರ್ಣಿ, ಅಶ್ವಥ ರಾವ, ಸಂಜೀವ, ನಿಖಿಲೆಶ,ಗುಂಡೆರಾವ ಕುಲಕರ್ಣಿ, ವೆಂಕಟ ರಾವ ಕುಲಕರ್ಣಿ, ಪ್ರಸನ್ನ ಸಾಮ್ರಣಿ ಉಪಸ್ಥಿತರಿದ್ದರು.
ಬಿದ್ದಾಪುರ ಕಾಲೋನಿಯ ಮಠ
ಬಿದ್ದಾಪುರ ಕಾಲೋನಿ ರಾಯರ ಮಠದಲ್ಲಿ ರಾಘವೇಂದ್ರ. ಸ್ವಾಮಿಗಳ ಪೂರ್ವಾರಾಧನೆ ನಿಮಿತ್ತ ವೆಳಗ್ಗೆ ಸುಪ್ರಭಾತ, ಅಲಂಕಾರ, ರಾಯರ ಅಷ್ಟೋತ್ತರ ಪಾರಾಯಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಡಾ.ಕೃಷ್ಣ ಕಾಕಲವಾರ ಅವರು ರಾಯರ ಮಹಿಮೆ ಕುರಿತುಪ್ರವಚನ ನೀಡಿದರು.
ಗುರುರಾಜ ನವಲಿ, ಗುರುರಾಜ ಕನಕಗಿರಿ ಸೇರಿದಂತೆ ಬಡಾವಣೆ ಭಕ್ತರು ಪಾಲ್ಗೊಂಡಿದ್ದರು.
ಬ್ರಹ್ಮಪುರ ಉತ್ತರಾದಿ ಮಠ
ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಯಾರಯ ಆರಾಧನೆ ಜರುಗಿತು.
ಬೆಳಗ್ಗೆ, ರಾಯರ ಅಷ್ಟೋತ್ತರ,ವಿಷ್ಣು ಸಹಸ್ರನಾಮ ಪಾರಾಯಣ. ರಾಯರ ಮೃತ್ತಿಕಾ ವೃಂದಾವನಕ್ಕೆ ಅಲಂಕಾರ, ಪುಷ್ಪಾರ್ಚನೆ, ಪಂಚಾಮೃತಾಭಿಷೇಕ, ನೈವೇಧ್ಯ ಹಾಗೂ ಸಕಲಭಾದಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮಠದ ವ್ಯವಸ್ಥಾಪಕ, ಪಂ. ವಿನೋದಾಚಾರ್ಯ ಗಲಗಲಿ, ಉತ್ತರಾದಿ ಮಠದಮಠಾಧಿಕಾರಿ ರಾಮಾಚಾರ್ಯಘಂಟಿ, ಪಂ. ಅಭಯಾಚಾರ್ಯ, ನರಸಿಂಹಾಚಾರ್ಯ, ಬಾಲಕೃಷ್ಣ ಲಾತೂರಕರ ಸೇರಿದಂತೆ ಬಡಾವಣೆ ಭಕ್ತರು ಭಗವಹಿಸಿದ್ದರು.