ಕಲಬುರಗಿಯಲ್ಲಿ ಬಿರುಸಿನ ಮಳೆ ; ಬೆಳೆಗಳಿಗೆ ಜೀವಕಳೆ ಕರಗುತ್ತಿರುವ ಬರದ ಕರಿಮೋಡ

IMG-20230720-WA0004
Published on

ಕಲಬುರಗಿಯಲ್ಲಿ ಬಿರುಸಿನ ಮಳೆ
ಕಲಬುರಗಿ : ತೊಗರಿ ನಾಡು ಕಲಬುರಗಿ ನಗರದಲ್ಲಿ ಗುರುವಾರ ನಸುಕಿನ ಜಾವದಿಂದ ಬಿರುಸಿನ ಮಳೆಯಾಗುತ್ತಿದೆ. ಇದರಿಂದಾಗಿ ಬರದ ಕರಿಮೋಡ ಕರಗಿ ನೀರಾಗುತ್ತಿದೆ. ಬಿತ್ತನೆಯಾದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ನಗರದ ಎಲ್ಲಡೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಶಾಲೆಗೆ ಹೋಗುವ ಮಕ್ಕಳು ರೇನ್ ಕೋಟ್ ಧರಿಸಿಕೊಂಡು, ಛತ್ರಿ ಹಿಡಿದುಕೊಂಡು ಹೋಗುತ್ತಿದ್ದಾರೆ.

ಸೋಮವಾರ ತಡರಾತ್ರಿ ಸಣ್ಞಗೆ ಶುರುವಾಗಿದ್ದ ಮಳೆಯು ಮಂಗಳವಾರ ದಿನವಿಡಿ ತುಂತುರು ಮಳೆಯಾಗಿ ಬುಧವಾರ ನಸುಕಿನವರೆಗೂ ಸುರಿದು ನಿಂತಿತ್ತು. ಬುಧವಾರ ದಿನವಿಡಿ ಮಳೆ ಇರಲಿಲ್ಲ.‌ಆದರೆ ಮೋಡ‌ ಕವಿದ ವಾತಾವರಣವು ಇತ್ತು. ಆಗಾಗ್ಗೆ ಮಳೆ ಸಿಂಚನವಾಗುತ್ತಿತ್ತು. ಆದರೆ, ಜೋರಾಗಿ ಇರಲಿಲ್ಲ.

ಮತ್ತೇ ಬುಧವಾರ ತಡರಾತ್ರಿಯಿಂದ ಸಣ್ಣಗೆ ಬರಲು ಶುರುವಾಯಿತು. ಗುರುವಾರ ನಸುಕಿನಿಂದ ಜೋರಾಯಿತು. ಈಗ ಕಳೆದ ಎರಡು ಗಂಟೆಗಳಿಂದ ಜೋರಾಗಿ ವರುಣ ಅಬ್ಬರಿಸುತ್ತಿದ್ದಾನೆ.

ಕೃಷಿಗೆ ಅನುವು
ಮಳೆಯು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಡೆ ಆಗುತ್ತಿದೆ. ಹೀಗಾಗಿ ಈಗಾಗಲೇ ಬಿತ್ತನೆಯಾದ ಬೆಳೆಗೆ ಜೀವ ನೀಡಿಸಂತಾಗಿದೆ. ಅಲ್ಲದೆ ಬಾಕಿ ಉಳಿದ ಬಿತ್ತನೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಅನುವು ಆಗುವುದರ ಜತಗೆ ಕುಡಿಯುವ ನೀರಿನ ಬವಣೆ ಕಡಿಮೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net