ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಕೌಶಲ ಪ್ರಯೋಗಾಲಯ ಸ್ಥಾಪನೆ

IMG-20230815-WA0021
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೊಗರಿ ನಾಡಿನ ಯುವ ಜನರ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ `ರಾಜೀವ್ ಗಾಂಧಿ ಅತ್ಯಾಧುನಿಕ ಕೌಶಲ ಪ್ರಯೋಗಾಲಯ, ಸಂಶೋಧನಾ ಕೇಂದ್ರ`  ಸ್ಥಾಪಿಸಲಾಗುವುದು. ಅತ್ಯುತ್ತಮ ಒಳಾಂಗಣ ಕ್ರೀಡಾ ಸೌಲಭ್ಯ ಕಲ್ಪಿಸಲಾಗುವುದು ಹಾಗೂ  `ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು` ಅಸ್ತಿತ್ವಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
೭೭ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ತ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ರಾಷ್ಟç ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಸಾರ್ವಜನಿಕರನ್ನುz್ದೆÃಶಿಸಿ ಮಾತನಾಡಿ, ಯುವಕರಿಗೆ ಕೌಶಲದಲ್ಲಿ ಹೆಚ್ಚು ಪರಿಣಿತಿಗೊಳಿಸಲು ಸಂಶೋಧನಾ ಕೇಂದ್ರ ಸಹಕಾರಿಯಾಗಲಿದೆ ಎಂದರು.
ಯುವ ಸಮೂಹವನ್ನು  ಅತ್ಯಾಧುನಿಕ ನೂತನ ತಂತ್ರಜ್ಞಾನಗಳಲ್ಲಿ ಉದ್ಯಮಶೀಲರನ್ನಾಗಿಸಲು  ಕೌಶಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸ್ಕಿಲ್ ಕೌನ್ಸಿಲ್ ಫಾರ್ ಎಮರ್ಜಿಂಗ್ ಟೆಕ್ನಾಲಜಿ ಸ್ಥಾಪಿಸಲಾಗಿದೆ. ಇದರ ಮೂಲಕ ಐಟಿ-ಬಿಟಿ ವಲಯದಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗಾವಶಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸಲಾಗುತ್ತದೆ ಎಂದು ಪ್ರಿಯಾಂಕ್ ತಿಳಿಸಿದರು.
ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳ ಪದವೀಧರು ಹಾಗೂ  ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಸರ್ಕಾರಿ  ಸೇವೆಯಲ್ಲಿ  ತೊಡಗಿಕೊಳ್ಳಲು ತರಬೇತಿ ನೀಡಲು ನಗರದ  ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ೨,೦೦೦ ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ತರಬೇತಿ ನೀಡಲು ``ಸೆಂಟರ್ ಆಫ್ ಎಕ್ಸ್ಲೆನ್ಸ್ ಫಾರ್ ಕಾಂಪಿಟೇಟಿವ್ ಏಕ್ಸಾಮ್`` ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದ ಅಭ್ಯರ್ಥಿಗಳು  ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕ-ಯುವತಿಯರಿಗೆ ನೆರವಾಗಲು ``ಕಲ್ಯಾಣ ಕರ್ನಾಟಕ ಎಲಿವೇಟ್`` ಕಾರ್ಯಕ್ರಮದಡಿ ನವೋದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತದೆ.ಗ್ರಾಮೀಣ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಕೆಆರ್‌ಐಡಿಎಲ್ ಸಂಸ್ಥೆಯ ಸಿಆರ್‌ಎಸ್ ಅನುದಾನದಲ್ಲಿ ಪುಸ್ತಕ ವಿತರಿಸಲಾಗುತ್ತಿದೆ ಎಂದು  ಸಚಿವ ಪ್ರಿಯಾಂಕ್ ಹೇಳಿದರು. ದೇಶದ ಸ್ವಾತಂತ್ರÈಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸಿದರು. ದೇಶಕ್ಕಾಗಿ ದುಡಿದು ತ್ಯಾಗ ಬಲಿದಾನಗಳಿಂದ ಈ  ಸ್ವಾತಂತ್ರö್ಯ ತಂದು ಕೊಟ್ಟಿದ್ದಾರೆ.ಅದನ್ನು ಒಳಿತಿಗಾಗಿ ಬಳಸೋಣ ಎಂದರು.
ಆರ್‌ಪಿಐ ಮಹಾದೇವ ಪಾಟೀಲ,ಆರ್‌ಎಸ್‌ಐ ಗುರುಬಸವರಾಜ ನೇತೃತ್ವದಲ್ಲಿ ಜರುಗಿದ  ೧೪ ತುಕಡಿಗಳ ಪಥಸಂಚಲನ ಜನಮನ ಸೆಳೆಯಿತು.ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕö್ರತಿಕ ಕಾರ್ಯಕ್ರಮಗಳು ಸರ್ವರ ಮನಸೊರೆಗೊಳಿಸಿದವು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್ಲರು ಸೇರಿಕೊಂಡು ವೀಕ್ಷಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿz್ದÉÃವೆ ಕಿರು ಹೊತ್ತಿಗೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಗಣ್ಯರು ಬಿಡುಗಡೆ ಮಾಡಿದರು.
ಶಾಸಕರಾದ  ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ ಹುಮನಾಬಾದ,ತಿಪ್ಪಣ್ಣಪ್ಪ ಕಮಕನೂರ, ಸುನೀಲ ವಲ್ಯಾಪುರೆ,ಶಶೀಲ್ ನಮೋಶಿ, ಮೇಯರ್ ವಿಶಾಲ ದರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಹೆಚ್ಚುವರಿ ಐಜಿಪಿ ಅನುಪಮ ಅಗ್ರವಾಲ್, ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್‌ಪಿ ಇಶಾ ಪಂತ್, ಜಿಪಂ  ಸಿಇಒ ಡಾ.ಭಂವರ್‌ಸಿAಗ್ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಶಂಕರ್, ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net