

ಕಲಬುರಗಿ: ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಏ.೨೯ ಮತ್ತು ೩೦ರಂದು ನಡೆಯಲಿರುವ ಅನುಭವ ಮಂಟಪ&ಬಸವಾದಿ ಶರಣರ ವೈಭವ ಕರ‍್ಯಕ್ರಮ ನಿಮಿತ್ತ ಹಮ್ಮಿಕೊಂಡಿರುವ ಅನುಭವ ಮಂಟಪ ರಥಯಾತ್ರೆ ಗುರುವಾರ ಮಧ್ಯಾಹ್ನ ೧ಕ್ಕೆ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಆವರಣಕ್ಕೆ ಆಗಮಿಸಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದ್ದಾರೆ. ಕಮಲಾಪುರ ತಾಲೂಕಿನ ಗಡಿಯಲ್ಲಿ ರಥಕ್ಕೆ ಬರಮಾಡಿಕೊಂಡ ನಂತರ ಮಧ್ಯಾಹ್ನ ೧ಕ್ಕೆ ಜಗತ್ ವೃತ್ತದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಸಂಭ್ರಮದ ಸ್ವಾಗತ ನೀಡಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳು, ಬಸವಾದಿ ಶರಣರ ಅನುಯಾಯಿಗಳು, ಸಂ&ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕರ‍್ಯಕ್ರಮ ಯಶಸ್ವಿಗೊಳಿಸಬೇಕು. ನಂತರ ರಥ ಜೇರ‍್ಗಿ ಮರ‍್ಗವಾಗಿ ವಿಜಯಪುರ ಜಿಲ್ಲೆಗೆ ತೆರಳಲಿದೆ ಎಂದು ಹೇಳಿದ್ದಾರೆ.