ಕಲಬುರಗಿ ಸಿಯುಕೆಗೆ 38ನೇ ಸ್ಥಾನ

Prof Battu Satyanarayana
Published on

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂಡಿಯಾ ಟುಡೆ ಭಾರತದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳ ಶ್ರೇಯಾಂಕ-೨೦೨೪ರಲ್ಲಿ ೩೮ನೇ ಸ್ಥಾನ ಪಡೆದುಕೊಂಡಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
ವಿವಿ ಸಾಧನೆ ಹೆಮ್ಮೆ ಪಡುವಂಥದ್ದು. ಇದರ ಎಲ್ಲ ಶ್ರೇಯಸ್ಸು ನಮ್ಮ ಬದ್ಧತೆ ಮತ್ತು ಸಮರ್ಪಿತ ಶಿಕ್ಷಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಸಿಯುಕೆ ಇತಿಹಾಸದಲ್ಲಿ ಇದೇ ಮೊದಲ ಸಲ ನಾವು ಈ ಶ್ರೇಯಾಂಕದಲ್ಲಿ ಭಾಗವಹಿಸಿ ಉತ್ತಮ ಶ್ರೇಣಿ ಪಡೆದಿz್ದೆÃವೆ. ಇದಕ್ಕಾಗಿ ವಿವಿ ಪಾಲುದಾರರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ನಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನೇಮಕಾತಿ, ಸಂಶೋಧನೆ ಮತ್ತು ಅಭಿವೃದ್ಧಿ, ಆಡಳಿತ ಮತ್ತು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಉತ್ತಮ ಅಂಕ ಗಳಿಸಿz್ದÉÃವೆ. ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗೆ ಪ್ರಯತ್ನಿಸುವುದರ ಜತೆಗೆ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಶ್ರೇಯಾಂಕ ಮತ್ತು ಮಾನ್ಯತೆಯ ನೋಡಲ್ ಅಧಿಕಾರಿ ಡಾ.ಗುರುರಾಜ ಮುಕರಂಬಿ ಮಾತನಾಡಿ, ೧೨೦ಕ್ಕೂ ಹೆಚ್ಚಿನ ವಿಷಯಗಳನ್ನು ಆಧರಿಸಿ ಶ್ರೇಯಾಂಕವನ್ನು ಆರು ಮಾನದಂಡಗಳಾಗಿ ವರ್ಗೀಕರಿಸಲಾಗಿದೆ. ಖ್ಯಾತಿ ಮತ್ತು ಆಡಳಿತ, ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆ, ಮೂಲಸೌಕರ್ಯ ಮತ್ತು ಜೀವನ ಅನುಭವ, ವ್ಯಕ್ತಿತ್ವ ಮತ್ತು ನಾಯಕತ್ವ ಅಭಿವೃದ್ಧಿ, ವೃತ್ತಿ ಪ್ರಗತಿ ಮತ್ತು ಉದ್ಯೋಗ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ನೇಮಕಾತಿ ಮಾಡುವವರ ಅಭಿಪ್ರಾಯ. ಈ ಮಾನದಂಡಗಳಿಗೆ ಸಂಬAಧಿಸಿದ ಎಲ್ಲ ದಾಖಲೆ ಒದಗಿಸಲಾಗಿತ್ತು. ಕಠಿಣ ಶ್ರೇಯಾಂಕದ ಪ್ರಕ್ರಿಯೆಯಾಗಿತ್ತು ಎಂದು ತಿಳಿಸಿದ್ದಾರೆ.
ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್, ಐಕ್ಯುಎಸಿ ನಿರ್ದೇಶಕ ಪ್ರೊ.ಗಣೇಶ ಪವಾರ ಇತರರು ಸಂತಸ ವ್ಯಕ್ತಪಡಿಸಿ ಕ್ರಿಯಾಶೀಲ ನಾಯಕತ್ವಕ್ಕಾಗಿ ಕುಲಪತಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net