ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಗೆ ಗ್ರೀನ್ ಸಿಗ್ನಲ್

IMG-20230519-WA0008
Published on


ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿAಗ್‌ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ)ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಗಲಲ್ಲಿ ಮಾತ್ರ ಸೀಮಿತವಾಗಿದ್ದ ವಿಮಾನಯಾನ ಸೇವೆ ಇನ್ಮುಂದೆ ಸೂರ್ಯಾಸ್ತದ ನಂತರವೂ ಸಿಗಲಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕದ ವ್ಯಾಪಾರ-ವಹಿವಾಟು ಸುಧಾರಣೆ ಜತೆಗೆ ಹೊಸ ಹೊಸ ಕೈಗಾರಿಕೆಗಳನ್ನು ಇತ್ತ ಆಕರ್ಷಿಸಲು ಪೂರಕ ವಾತಾವರಣ ಸೃಷ್ಟಿಸುವ ನಿರೀಕ್ಷೆ ಮೂಡಿದೆ.
ಇಲ್ಲಿನ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಇದೆ. ಇದರ ಮಧ್ಯೆ ನೈಟ್ ಲ್ಯಾಂಡಿAಗ್ ಸೌಲಭ್ಯ ಸಿಕ್ಕಿದೆ. ಇಲ್ಲಿಂದ ಹೊಸ ಹೊಸ ಏರ್‌ಲೈನ್ಸ್ ಸೇವೆ ಪ್ರಾರಂಭಿಸಲು ಆಪರೇಟರ್‌ಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ. ವಿಮಾನ ನಿಲ್ದಾಣದ ರನ್‌ವೇ-೨೭ರ ಮೂಲಕ ಆಪರೇಟ್ ಮಾಡಲು ಡಿಜಿಸಿಎ ಸಮ್ಮತಿ ಸೂಚಿಸಿದ್ದಾರೆ. ವಿಮಾನ ಹಾರಾಟದ ಬಹುತೇಕ ಪ್ರಕ್ರಿಯೆ ರನ್‌ವೇ-೨೭ರಲ್ಲಿ ನಡೆಯುತ್ತಿದೆ.
ನೈಟ್ ಲ್ಯಾಂಡಿAಗ್ ಸೌಲಭ್ಯದಿಂದ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ದಿನದ ೨೪ ತಾಸು ವಿಮಾನ ಹಾರಾಟ ನಡೆಯಲಿದೆ. ನವದೆಹಲಿ, ಮುಂಬೈ, ಹೈದರಾಬಾದ್ ಸೇರಿ ಪ್ರಮುಖ ವಾಣಿಜ್ಯ ನಗರಗಳಿಗೆ ಲಿಂಕ್ ಸಿಗಲಿದ್ದು, ವಾಣಿಜ್ಯ, ವ್ಯಾಪಾರ ವೃದ್ಧಿಗೆ ಅನುಕೂಲವಾಗಲಿದೆ. ಏರ್ ಆಂಬುಲೆನ್ಸ್ ದಿನದ ೨೪ ತಾಸು ಕಾರ್ಯನಿರ್ವಹಣೆ ಮಾಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net