

ನಿರ್ಗಮಿತ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ | ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಧ್ವನಿ ಇಲ್ಲದವರ ಧ್ವನಿಯಾಗಿ ಅವರ ಸೇವೆ ಮಾಡಲು ಉz್ದೆÃಶದಿಂದಲೇ ಸಾರ್ವಜನಿಕ ಸೇವೆಗೆ ಬಂದಿz್ದÉÃನೆ. ಕಲಬುರಗಿ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ತೊಗರಿ ನಾಡಿನ ಜನರು ತೋರಿಸಿದ ಪ್ರೀತಿ ಎಂದು ಮರೆಯಲ್ಲ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಹೇಳಿದರು.
ಸೋಮವಾರ ನಗರದÀ ಡಿಸಿ ಕಚೇರಿ ಸಭಾಂಗಣದಲ್ಲಿ ಕಚೇರಿ ಸಿಬ್ಬಂದಿ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯ ಜನರು ನೇರವಾಗಿ ಮಾತನಾಡುವರು. ಒಳಗೊಂದು-ಹೊರಗೊAದು ಮಾತನಾಡುವರಲ್ಲ. ಹಾಗೆ ನನ್ನ ಸ್ವಭಾವ ಸಹ, ಹೀಗಾಗಿ ಇಲ್ಲಿ ಮಾದರಿಯಾಗಿ ಕೆಲಸ ಸಾಧ್ಯವಾಯಿತು ಎಂದರು.
ಕಲಬುರಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ಚೀಕರಿಸಿದಾಗ ಕೋವಿಡ್ ಲಸಿಕೆ ಎರಡನೇ ಡೋಸ್ ನೀಡುವುದರಲ್ಲಿ ಪ್ರಗತಿ ಇರಲಿಲ್ಲ. ಕೊನೆಯ ಸ್ಥಾನದಲ್ಲಿತ್ತು.ಆರೋಗ್ಯ ಇಲಾಖೆಯ ಸಹಕಾರದಿಂದ ಮೂರೇ ತಿಂಗಳಲ್ಲಿ ಶೇ.೭೩ ರಿಂದ ೯೩ಕ್ಕೆ ಪÀ್ರಗತಿ ಸಾಧಿಸಲಾಯಿತು. ಸಕಾಲ, ಭೂಮಿ ಅರ್ಜಿ ವಿಲೇವಾರಿಯಲ್ಲಿ ರಾಜ್ಯಕ್ಕೆ ಟಾಪ್ ೫ ರಲ್ಲಿ ಬಂದಿತು. ಅದರಲ್ಲಿ ತಹಸೀಲ್ದಾರ ಮತ್ತು ಸಿಬ್ಬಂದಿ ಪಾತ್ರ ಹಿರಿದಾಗಿದೆ ಎಂದು ಎಲ್ಲರನ್ನು ಸಹಕಾರ ಶ್ಲಾಘಿಸಿದರು. ಅಲ್ಲದೆ ಕೆಲವೊಂದು ಸಲ ಸಿಬ್ಬಂದಿ ಮೇಲೆ ಸಿಟ್ಟಿಗೆ ಬಂದಿರಬಹುದು, ಆದರೆ, ಅದು ಕೆಲಸ ಮಾಡಲಿ ಎಂಬ ಸಾತ್ವಿಕತೆಯಿಂದ ಹೊರತು ಬೇರೆ ಉz್ದÉÃಶದಿಂದ ಅಲ್ಲ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಸಾಮಾಜಿಕ ಭದ್ರತಾ ಪಿಂಚಣಿ ನೀಡಬೇಕು ಎಂಬ ನನ್ನ ಕನಸನ್ನು ರಾಜ್ಯ ಸರ್ಕಾರ ಹಲೋ ಕಂದಾಯ ಸಚಿವರೇ ಯೋಜನೆ ಮೂಲಕ ಜಾರಿಗೆ ತಂದ ಪರಿಣಾಮ ೧.೫೦ ಲಕ್ಷ ಜನರು ಮನೆಯ ಬಾಗಿಲಲ್ಲೆ ಪಿಂಚಣಿ ಪಡೆದಿದ್ದಾರೆ. ಮಳಖೇಡದಲ್ಲಿ ಪ್ರಧಾನಮಂತ್ರಿಗಳು ಜಿಲ್ಲೆಯ ೨೭ ಸಾವಿರ ಸೇರಿ ಒಂದೇ ದಿನ ೫೨ ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದು ಗಿನ್ನಿಸ್ ದಾಖಲೆಯಾಗಿದೆ. ಚುನಾವಣೆ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಎಲ್ಲರು ಸಹಕಾರ ನೀಡಿದರು ಎಂದು ಸ್ಮರಿಸಿದರು.
ಎಸ್‌ಪಿಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಮೊದಲಾದವರು ಮಾತನಾಡಿ, ಯಶವಂತ ಗುರುಕರ್ ಅವಧಿಯಲ್ಲಿ ಆಳಂದ ಪ್ರಕರಣ, ಪ್ರಧಾನಮಂತ್ರಿಗಳ ಕಾರ್ಯಕ್ರಮ, ವಿಧಾನಸಭೆ ಚುನಾವಣೆ ಹೀಗೆ ಎಲ್ಲವನ್ನು ಅವರ ಮುಂದಾಲೋಚನೆ ಮತ್ತು ದೃಢ ನಿರ್ಧಾರದ ಪರಿಣಾಮ ಸುಗಮವಾಗಿ ಮಾಡಲು ಸಾಧ್ಯವಾಯಿತು. ಕೆಳ ಹಂತದ ಸಿಬ್ಬಂದಿ ಕೆಲಸವನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದ ಮಾನವೀಯತೆ ಹೊಂದಿದ ಜಿಲ್ಲಾಧಿಕಾರಿಯಾಗಿದ್ದರು ಎಂದು ನೆನಪು ಮೆಲುಕು ಹಾಕಿದರು.
ನೂತನ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯನ್ನು ಮತ್ತಷ್ಟು ಪ್ರಗತಿ ಮಾಡಲು ಎಲ್ಲರು ಸೇರಿಕೊಂಡು ಸಾಂಘಿಕವಾಗಿ ಶ್ರಮಿಸೋಣ. ಹಿಂದೆ ಯಶವಂತ ಗುರುಕರ್ ಅವರಿಗೆ ನೀಡಿದ ಸಹಕಾರ ತಮಗೂ ನೀಡಿ ಎಂದು ಕೋರಿದರು.
ಡಿಸಿಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ರಾಚಪ್ಪ, ಸಹಾಯಕ ಆಯುಕ್ತರಾದ ಮಮತಾಕುಮಾರಿ, ಕಾರ್ತಿಕ್ ಎಂ., ಮಹಿಳಾ ಇಲಾಖೆ ಉಪನಿರ್ದೇಶಕ ನವೀನ್ ಯು., ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿಸಿ ಕಚೇರಿ ಲೆಕ್ಕಾಧಿಕಾರಿ ಮಂಜುಳಾ, ತಹಶೀಲ್ದಾರ ಸಂಜೀವಕುಮಾರ ದಾಸರ್, ಡಿಸಿ ಅಂಗ ರಕ್ಷಕ ಶಿವಾನಂದ ಜಾಧವ ಮೊದಲಾದವರು ಅನಿಸಿಕೆ ಹಂಚಿಕೊAಡರು.ಇAದು ಯಶವಂತ ಗುರುಕರ್ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಭಂದಿ ಭಾಗವಹಿಸಿದ್ದರು.
======