ಕಲಬುರಗಿ ಕುರುಬರಿಗೆ ಎಂಎಲ್‌ಸಿ ಮಾಡಿ ಸರ್ಕಾರಕ್ಕೆ ಸಂಘದ ಆಗ್ರಹ

IMG-20230804-WA0058
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯ ಕುರುಬ ಗೊಂಡ ಸಮಾಜದವರು ಯಾವಾಗಲೂ ಕಾಂಗ್ರೆಸ್ ಪರವಾಗಿ ನಿಂತು ಬೆಂಬಲಿಸುತ್ತಿರುವುದರಿAದ  ಪಕ್ಷಕ್ಕಾಗಿ ದುಡಿದ ಸಮಾಜದವರೊಬ್ಬರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಬೇಕು,   ಇನ್ನೊಬ್ಬರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿ¯್ಲÁಧ್ಯP್ಷÀ ಗುರುನಾಥ ಪೂಜಾರಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ  ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರ ಜತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಕಳೆದ 30  ರಂದು ಬೀರಲಿಂಗೇಶ್ವರ ದೇವಾಲಯದಲ್ಲಿ ಜರುಗಿದ ಸಮಾಜದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಒಕ್ಕೋರಲ ನಿರ್ಧಾರಕ್ಕೆ ಬಂದು ಸರ್ಕಾರವನ್ನು ಒತ್ತಾಯಿಸುತ್ತಿz್ದÉÃವೆ ಎಂದರು.
ಸAಘ ಯಾರೊಬ್ಬರ ಹೆಸರನ್ನು ಹೇಳುವುದಿಲ್ಲ. ಬದಲಿಗೆ ಕಾಂಗ್ರೆಸ್‌ನಲ್ಲಿರುವ ಹಿರಿಯರನ್ನು ಗುರುತಿಸಿ ಸ್ಥಾನಮಾನ ನೀಡಲಿ. ಅದು ಅವರ ಪಕ್ಷದವರು ನಿರ್ಧಾರ ಮಾಡಲಿ.ಜಿ¯್ಲÉಯಲ್ಲಿ 2 ಲP್ಷÀ 50 ಸಾವಿರ ಮತದಾರರಿದ್ದು,  ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ, ಶಾಸಕರು ಆಗಿಲ್ಲ. ಆದರೂ ಶೇ. 80 ರಷ್ಟು ಸಮಾಜದವರು ಕಾಂಗ್ರೆಸ್‌ಗೆ ಬೆಂಬಲ ನೀಡಿz್ದÁರೆ ಎಂದು ಹೇಳಿದರು.
 ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಸಮಬಾಳು ಸಮಪಾಲು ನೀಡಲು ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಪೂಜಾರಿ ಒತ್ತಾಯಿಸಿದರು.
ಕುರುಬ ಸಮಾಜಕ್ಕೆ  ವಿಧಾನ ಪರಿಷತ್ ನಾಮಕರಣದಲ್ಲಿ ಆದ್ಯತೆ ಕೊಟ್ಟಿಲ್ಲ. ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಹತ್ತಿರದಲ್ಲಿರುವ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಅವರು  ಜಿಲ್ಲೆಯ ಕುರುಬರನ್ನು ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿ ನೇಮಕ ಮಾಡಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಯಬಣ್ಣ ಪೂಜಾರಿ, ಧರ್ಮರಾಜ ಹೇರೂರ, ನಿರ್ಮಲಾ ಬರಗಾಲಿ, ಮಹೇಶ ಧರಿ, ಅಮೋಘಸಿದ್ಧ ಪೂಜಾರಿ, ಎನ್.ಎ. ಪೂಜಾರಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net