ಕರೊನಾ ವಿಪತ್ತು ಹೋಗಲಾಡಿಸಲು ಪ್ರಾರ್ಥನೆ

17SIRSI1
Published on

ಶಿರಸಿ: ಕರೊನಾ ಸೋಂಕಿನಿಂದ ಉಂಟಾದ ವಿಪತ್ತಿನಿಂದ ಮುಕ್ತಿ ಹೊಂದಲು ತಾಲೂಕಿನ ಮಂಜುಗುಣಿಯಲ್ಲಿ 21 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಶ್ರೀ ಸುದರ್ಶನ ಚಕ್ರ ಮೂರ್ತಿಯ ವಿಶೇಷ ಪೂಜೆಗೆ ಗುರುವಾರ ಚಾಲನೆ ದೊರೆತಿದೆ.

ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದ ವೈಶಿಷ್ಟ್ಯಗಳಲ್ಲೊಂದಾದ ಪ್ರಾಚೀನ ಶ್ರೀ ಸುದರ್ಶನ ಚಕ್ರ ಮೂರ್ತಿಗೆ ಮೇ 6ರವರೆಗೆ ಪ್ರತಿನಿತ್ಯ ಬೆಳಗ್ಗೆ 9ರಿಂದ 11ರವರೆಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿದೆ. ಗುರುವಾರ ಬೆಳಗ್ಗೆ ವೆಂಕಟರಮಣ ದೇವರಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ನೇತೃತ್ವದಲ್ಲಿ ಪೂಜೆಗೆ ಚಾಲನೆ ನೀಡಲಾಗಿದೆ.

ಮನುಷ್ಯನಲ್ಲಿ ರೋಗ ನಿವಾರಣೆಯ ಅಂತಃಶಕ್ತಿ ಜಾಗೃತಿ ಹೊಂದಲು ದೇವರ ಆರಾಧನೆಯ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ದೇವಸ್ಥಾನದಲ್ಲಿ 21 ದಿನಗಳ ಕಾಲ ಪ್ರತಿನಿತ್ಯ ಸುದರ್ಶನ ಚಕ್ರ ಮೂರ್ತಿಗೆ ನಿತ್ಯ 27 ಕಲಶಾಭೀಷೇಕ 4 ದಿನಕ್ಕೆ 108ರಂತೆ ಸುದರ್ಶನ ಮಂತ್ರದೊಂದಿಗೆ ತುಲಸಿ ಅರ್ಚನೆ ಅಭಿಷೇಕಾದಿ ತರ್ಪಣ ನೀಡಲಾಗುತ್ತದೆ.| ಶ್ರೀನಿವಾಸ ಭಟ್ಟ ದೇವಾಲಯದ ಪ್ರಧಾನ ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net