ಕರು ಕದ್ದು ಕತ್ತರಿಸಿದ್ದ ಏಳು ಆರೋಪಿಗಳ ಬಂಧನ

IMG-20250117-WA0213
Published on

ಆಲೂರು: ಮಾಂಸದ ಆಸೆಗೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಕರುವನ್ನು ಕದ್ದು ಕತ್ತರಿಸಿದ್ದ ಏಳು ಆರೋಪಿಗಳನ್ನು ಆಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹೆದ್ದುರ್ಗ ಗ್ರಾಮದ ಕೌಶಿಕ್, ಮೋಹನ್, ಮನೋಜ್, ಚಂದನ್, ಅಜ್ಗರ್, ಪವನ್ ಹಾಗೂ ಅಜಿತ್ ಬಂಧಿತ ಆರೋಪಿಗಳು.

ಹೆದ್ದುರ್ಗ ಗ್ರಾಮದ ಹೂವಣ್ಣ 12 ಹಸುಗಳನ್ನು ಸಾಕಿದ್ದು ಮಂಗಳವಾರ ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ತೆರಳಿದ್ದರು. ಮಾರನೇ ದಿನ ಬಂದು ನೋಡಿದಾಗ ಕರು ಕಳವಾಗಿರುವ ವಿಚಾರ ತಿಳಿದಿದೆ. ಎಲ್ಲ ಕಡೆ ಹುಡುಕಿದರೂ ಕರು ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗೆ ತಾಲೂಕಿನ ಮಡಬಲು ರೈಲ್ವೆ ಗೇಟ್‌ನಿಂದ ಸ್ವಲ್ಪ ದೂರದಲ್ಲಿ ಪ್ರಾಣಿಯ ರುಂಡ ಕಾಣಿಸಿದ್ದು ಅದನ್ನು ನೋಡಿದಾಗ ತಮ್ಮದೇ ಹಸು ಎಂದು ಗುರುತಿಸಿದ್ದಾರೆ.

ಜ.14ರ ಮಧ್ಯರಾತ್ರಿ ಕೊಟ್ಟಿಗೆಯಿಂದ ಕರುವನ್ನು ಕದ್ದೊಯ್ದು ದುಷ್ಕರ್ಮಿಗಳು ಅದನ್ನು ಕತ್ತರಿಸಿ ಅಲ್ಲಿಯೇ ಮಾಂಸ ಬೇಯಿಸಿ ಊಟ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶಕ್ಕಾಗಿ ರುಂಡ, ಕರುಳು, ಚರ್ಮವನ್ನು ನದಿಗೆ ಎಸೆಯಲು ಯತ್ನಿಸಿದ್ದರು. ಆದರೆ ಬೆಳಕಾಗಿದ್ದರಿಂದ ಜಮೀನು ಕೆಲಸಕ್ಕೆ ರೈತರು ಬರುತ್ತಿದ್ದಂತೆ ರುಂಡವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದರು.

ರೈತ ಹೂವಣ್ಣ ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಆಲೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net