ಕರಾವಳಿಯಾದ್ಯಂತ ಚುರುಕು ಪಡೆದ ಮಳೆ

20 YLP 02
Published on

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಭಾನುವಾರ ಮಧ್ಯಾಹ್ನದಿಂದ ಮಳೆ ಚುರುಕುಗೊಂಡಿದೆ. ಸೆ. 21 ಹಾಗೂ 23 ರಂದು ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಗಾಳಿ ಹೆಚ್ಚಿಲ್ಲದೇ ಎಡಬಿಡದೇ ಧೋ ಎಂದು ಮಳೆ ಸುರಿಯುತ್ತಿದೆ. ಭಟ್ಕಳದಲ್ಲಿ ಕೊಂಚ ಹೆಚ್ಚಾಗೇ ಇದೆ. ಆದರೆ, ಎಲ್ಲೂ ಹಾನಿ ಸಂಭವಿಸಿಲ್ಲ.

ಘಟ್ಟದ ಮೇಲಿನ ಭಾಗದಲ್ಲಿ ಮೋಡದ ವಾತಾವರಣವಿದ್ದು, ಆಗೊಮ್ಮೆ, ಈಗೊಮ್ಮೆ ಮಳೆಯಾಗುತ್ತಿದೆ.

ಜಿಲ್ಲೆಯ ಮಳೆ ವರದಿ: ಭಾನುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 77, ಭಟ್ಕಳದಲ್ಲಿ 20.4, ಹಳಿಯಾಳದಲ್ಲಿ 18, ಹೊನ್ನಾವರದಲ್ಲಿ 12.6, ಕಾರವಾರದಲ್ಲಿ 50.6, ಕುಮಟಾದಲ್ಲಿ 17.2, ಮುಂಡಗೋಡಿನಲ್ಲಿ 8. ಸಿದ್ದಾಪುರದಲ್ಲಿ 4,2, ಶಿರಸಿಯಲ್ಲಿ 10.5, ಜೊಯಿಡಾದಲ್ಲಿ 42.6, ಯಲ್ಲಾಪುರದಲ್ಲಿ 30.2 ಮಿಮೀ ಮಳೆಯಾಗಿದೆ.

ಗಾಳಿ ಮಳೆಗೆ ಉರುಳಿ ಬಿದ್ದ ಮರ

ಯಲ್ಲಾಪುರ: ಶನಿವಾರ ರಾತ್ರಿ ಸುರಿದ ಮಳೆ-ಗಾಳಿಗೆ ಪಟ್ಟಣದ ಮಾಗೋಡಕ್ರಾಸ್ ಬಳಿ ಮಾಗೋಡ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ಲೈನ್ ಹರಿದು ಮಾಗೋಡ, ನಂದೊಳ್ಳಿ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಯಿತು.

ಭಾನುವಾರ ರಜಾ ದಿನವಾಗಿದ್ದರಿಂದ ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ, ಚಂದಗುಳಿ ಘಂಟೆ ಗಣಪತಿ ದೇವಸ್ಥಾನಗಳಿಗೆ ತೆರಳುವ ಪ್ರವಾಸಿಗರು ಮುಂದಕ್ಕೆ ತೆರಳಲಾಗದೆ ಪರದಾಡುವಂತಾಯಿತು. ನಂತರ ಹೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net