ಕರಾಟೆಯಲ್ಲಿ ವಿವಿಧ ಬಹುಮಾನ

ಕರಾಟೆಯಲ್ಲಿ ವಿವಿಧ ಬಹುಮಾನ
Published on

ವಿರಾಜಪೇಟೆ: ಮೈಸೂರಿನ ಟೆರೆಷಿಯನ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕೊಡಗು ಟೀಮ್ ಮಿಯಾಗಿ ಗೋಜೂ ರಿಯೊ ತರಬೇತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ವಿ.ಎನ್.ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮೈಸೂರು ವತಿಯಿಂದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಹಮ್ಮಿಕೊಳ್ಳಲಾಗಿತ್ತು. ವಿರಾಜಪೇಟೆಯ ಟೀಮ್ ಮಿಯಾಗಿ ಗೋಜೂ ರಿಯೊ ತರಬೇತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿ 12 ಚಿನ್ನ, 15ಬೆಳ್ಳಿ, 8ಕಂಚಿನ ಪದಕ ಪಡೆದುಕೊಂಡಿದ್ದಾರೆ. ಸೆನ್ಸಾಯಿ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net