ಕಬ್ಬು ಕಟಾವು ಕಾರ್ಮಿಕರು ಶ್ರಮಜೀವಿಗಳು

Viswas vidya
Published on

ಶಿರಸಂಗಿ: ಗ್ರಾಮದಲ್ಲಿ ನಾಲ್ಕು ತಿಂಗಳ ಕಾಲ ಬಿಡುವು ತೆಗೆದುಕೊಳ್ಳದ ಕಬ್ಬು ಕಟಾವು ಕೆಲಸಗಾರರಿಗೆ ಈಚೆಗೆ ಸನ್ಮಾನ ಕಾರ್ಯಕ್ರಮ ಮತ್ತು ರಸಮಂಜರಿ ನೆರವೇರಿತು. ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಬಿಸಿಲು ಲೆಕ್ಕಿಸದೆ ನಿರಂತರವಾಗಿ ಕಬ್ಬು ಕಟಾವು ಮಾಡುವ ಕಾರ್ಮಿಕರು ಶ್ರಮಜೀವಿಗಳು.

ಶಿರಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಾವಸ್ಥೆಯಲ್ಲಿದ್ದು, ಸರ್ಕಾರದಿಂದ 3.5 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಹಾಗೂ ಕಾಳಿಕಾ ದೇವಸ್ಥಾನದಿಂದ ಗವಿಸಿದ್ದೇಶ್ವರ ದೇವಸ್ಥಾನದವರೆಗೆ 95 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಸದಸ್ಯರಾದ ಮಹಾರಾಜ ಕಣವಿ, ಮಲ್ಲಿಕಾರ್ಜುನ ಗೊರವನಕೊಳ್ಳ, ಮುಖಂಡರಾದ ಶಿವಯೋಗಿ ಹಿರೇಮಠ, ಪರಶುರಾಮ ಕಿತ್ತೂರ, ಸಿದ್ದು ಪಟ್ಟೇದ, ಮಾರುತಿ ಪೋತರಾಜ, ರಾಮಣ್ಣ ರಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net