ಕಬ್ಬನ್​ ಪಾರ್ಕ್​ನಲ್ಲಿ 20ಕ್ಕಿಂತ ಹೆಚ್ಚು ಮಂದಿ ಒಟ್ಟುಸೇರುವಂತಿಲ್ಲ!

WEB
Published on

ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು ಕಬ್ಬನ್​ ಪಾರ್ಕ್​ ಉದ್ಯಾನವನದಲ್ಲಿ ಪರಿಸರಕ್ಕೆ ಧಕ್ಕೆ ಉಂಟಾಗುವ ಚಟುವಟಿಕೆಗಳಿಗೆ ರ್ನಿಬಂಧ ವಿಧಿಸಲಾಗಿದ್ದು, 20ಕ್ಕಿಂತ ಹೆಚ್ಚು ಮಂದಿ ಸೇರುವ ಕಾರ್ಯಕ್ರಮಗಳಿಗೆ ತೊಟಗಾರಿಕೆ ಉಪ ನಿರ್ದೇಶಕರಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಕಬ್ಬನ್​ ಪಾರ್ಕ್​ನಲ್ಲಿ ಕೆಲವರ ಹುಚ್ಚಾಟದ ಪ್ರಕರಣಗಳು ನಡೆದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದವು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಇಲಾಖೆಯು ಸರ್ಕಾರದ ಜತೆ ಚರ್ಚಿಸಿ, ಉದ್ಯಾನದೊಳಗೆ ಯಾವ ಚಟುವಟಿಕೆಗೆ ಅನುಮತಿ ನೀಡಬೇಕು& ನೀಡಬಾರದು ಎಂಬುದರ ಬಗ್ಗೆ ದೃಢಪಡಿಸಿಕೊಳ್ಳಲಾಗಿದೆ. ಇದನ್ನಾಧರಿಸಿ ಉದ್ಯಾನದೊಳಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ರ್ನಿದಿಷ್ಟ ಪಟ್ಟಿಯನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಕಬ್ಬನ್​ ಪಾರ್ಕ್​ನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಜನರ ಸಂಖ್ಯೆಮಿತಿ, ಆಹಾರ ಮತ್ತು ಕೆಲವು ಆಟಿಕೆಗಳ ಮೇಲಿನ ನಿಷೇಧ ಇತ್ಯಾದಿ ವಿಷಯಗಳಿಗೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ಇದರನ್ವಯ ವಾಕಥಾನ್​/ ಮ್ಯಾರಥಾನ್​, ಸರ್ಕಾರಿ ಇಲಾಖೆಗಳಿಂದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಮಾನ್ಯತೆ ಪಡೆದ ದತ್ತಿ ಟ್ರಸ್ಟ್​ಗಳು ನಡೆಸುವ ಆರೋಗ್ಯ ಶಿಬಿರಗಳಿಗೆ ಬೆಳಗ್ಗೆ 5.30ರಿಂದ 9 ಮತ್ತು ಸಂಜೆ 4.30 ರಿಂದ ಸಂಜೆ 6ರ ವರೆಗೆ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಹೊರತಾಗಿ ಉದ್ಯಾನವನಕ್ಕೆ ಬಿಎಸ್​ಎನ್​ಎಲ್​ ಕಚೇರಿ ಕಡೆ ಪ್ರವೇಶ ಕಲ್ಪಿಸುವ ಸ್ಥಳದಿಂದ ಹೈಕೋರ್ಟ್​ ಕಟ್ಟಡವರೆಗೆ ಸಾರ್ವಜನಿಕರು ವಾಣಿಜ್ಯೇತರ ಚಟುವಟಿಕೆಗಳಾದ ಯೋಗ, ಪುಸ್ತಕ ಓದುವುದು ಇತ್ಯಾದಿಗೆ ರ್ನಿಬಂಧ ವಿಧಿಸಿಲ್ಲ. ಆದರೆ, 20ಕ್ಕಿಂತ ಹೆಚ್ಚು ಮಂದಿ ಸೇರಿದರೆ ಆಯೋಜಕರು ಉಪ ನಿರ್ದೇಶಕರಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಿಂದೆ ಹೊರಡಿಸಿದ್ದ ಆದೇಶವು ಭಾರಿ ಟೀಕೆ ಒಳಗಾದ ಕಾರಣ ಸಾರ್ವಜನಿಕರು ಮತ್ತು ಪ್ರವಾಸಿಗರು ತಮ್ಮ ಮೊಬೈಲ್​ ಅಥವಾ ಕ್ಯಾಮೆರಾ ಬಳಸಿ ಛಾಯಾಚಿತ್ರ ತೆಗೆದುಕೊಳ್ಳಲು ರ್ನಿಬಂಧ ಇರುವುದಿಲ್ಲ. ಆಹಾರ ಸೇವನೆಗೂ ಕೊಕ್​: ಉದ್ಯಾನವನದೊಳಗೆ ಪ್ರಕೃತಿ, ಸಸ್ಯ ಅಥವಾ ವನ್ಯಜಿವಿ ಛಾಯಾಗ್ರಹಣ ಮಾಡಲು ಬಯಸುವವರು ಇಲಾಖೆಯಿಂದ ಅನುಮತಿ ಪಡೆದು ಚಿತ್ರೀಕರಿಸಬೇಕು. ಸೈಕ್ಲಿಂಗ್​ ಮತ್ತು ಸ್ಕೇಟಿಂಗ್​ನಂತಹ ಚಟುವಟಿಕೆಗೆ ಅನುಮತಿ ನೀಡಿದ್ದರೂ, ಸರ್ಕಾರವು ಉದ್ಯಾನದಲ್ಲಿ ತರಗತಿ, ತರಬೇತಿ ನಡೆಸುವಂತಿಲ್ಲ. ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವ ಬಲೂನ್​, ಗಾಳಿಪಟ ಇತ್ಯಾದಿಯೊಂದಿಗೆ ಉದ್ಯಾನವನದೊಳಗೆ ಆಟವಾಡುವುದನ್ನು ಹಾಗೂ ಆಹಾರ ಸೇವನೆಗೆ ನಿಷೇಧ ಹೇರಲಾಗಿದೆ.

ಕಬ್ಬನ್​ ಪಾರ್ಕ್​ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಮಾರ್ಗಸೂಚಿಯ ಉದ್ದೇಶವಾಗಿದೆ. ಸುಮಾರು ಎರಡು ವಾರಗಳಲ್ಲಿ ಲಾಲ್​ಬಾಗ್​ಗೂ ಇದೇ ರೀತಿಯ ಮಾರ್ಗಸೂಚಿಗಳನ್ನು ತರಲಾಗುವುದು. > ಎಂ. ಜಗದೀಶ್​, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ

ಈ ಚಟುವಟಿಕೆಗಳಿಗೆ ರ್ನಿಬಂಧ ಪ್ರೀ ವೆಡ್ಡಿಂಗ್​, ಪೋಸ್ಟ್​ ವೆಡ್ಡಿಂಗ್​, ಬೇಬಿ ಫೋಟೋಶೂಟ್​ಗಳು; ಮಾಡೆಲಿಂಗ್​ ಚಿತ್ರೀಕರಣ ಅಥವಾ ರೀಲ್​ಗಳಿಗಾಗಿ ಅಥವಾ ಇತರ ವಾಣಿಜ್ಯ ವೀಡಿಯೋಗಳಿಗಾಗಿ ಚಿತ್ರೀಕರಣ.

ಅನುಷ್ಠಾನ ಕ್ರಮ ಏನು?

* ಮಾರ್ಗಸೂಚಿ ಉಲ್ಲಂಘಿಸುವವರಿಗೆ 500 ರೂ. ದಂಡ

* ಪದೇಪದೆ ಅಪರಾಧ ಮಾಡುವವರ ವಿರುದ್ಧ ಕಠಿಣ ಕ್ರಮ

* ಉದ್ಯಾನದ ಒಳಗೆ ಹೆಚ್ಚಿನ ಸೂಚನಾ ಫಲಕ ಬಳಕೆ

* ನಿಯಮಗಳ ಬಗ್ಗೆ ಜನರಿಗೆ ಜಾಗೃತಿ

* ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net