

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್‌ಇಎಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಆಯೋಜಿಸಿದ್ದ 40 ವರ್ಷ ಮೇಲ್ಪಟ್ಟವರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಬಡಕೇರಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ರನ್ನರ್ಸ್ ಪ್ರಶಸ್ತಿಗೆ ಲಿಮ್ರಾ ಕಡಂಗ ತೃಪ್ತಿಪಟ್ಟುಕೊಂಡಿತ್ತು.
ಬೇತ್ರಿಯಲ್ಲಿ ಭಾನುವಾರ ರಾತ್ರಿ ನಡೆದ ವಾಲಿಬಾಲ್ ಪಂದ್ಯಾವಳಿಯೂ ಮಳೆಯ ನಡುವೆಯೂ ಯಶಸ್ಸು ಕಂಡಿತ್ತು.
ವಾಲಿಬಾಲ್ ಕ್ರೀಡಾಕೂಟದಲ್ಲಿ ಎರಡು ಬಲಿಷ್ಠ ತಂಡಗಳಾದ ಕಡಬಕೇರಿ ಹಾಗೂ ಲಿಮ್ರಾ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
ಫೈನಲ್ ಪಂದ್ಯದಲ್ಲಿ ಕಬಡಕೇರಿ ತಂಡವು ಎರಡು ನೇರ ಸೆಟ್‌ಗಳಿಂದ ಗೆದ್ದಿತ್ತು.ಲಿಮ್ರಾ ಕಡಂಗ ತಂಡವು ಸಮಾನ ಹೋರಾಟ ನಡೆಸಿದರೂ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ.
ಕಬಡಕೇರಿ ತಂಡವು 25-22 ಹಾಗೂ 25-22 ಸ್ಕೋರ್‌ಗಳ ಮುಖಾಂತರ ಗೆಲುವು ಸಾಧಿಸಿ ಮೊದಲ ವರ್ಷದ 40 ವರ್ಷದ ಮೇಲ್ಪಟ್ಟವರ ಮುಸ್ಲಿಂ ಕಪ್ ವಾಲಿಬಾಲ್ ಕಪ್ ತನ್ನದಾಗಿಸಿಕೊಂಡಿತ್ತು.
ಪಂದ್ಯವಾಳಿಯ ಅತ್ಯುತ್ತಮ ಬ್ಲಾಕರ್ ಹಾಗೂ ಪಾಸರ್ ಪ್ರಶಸ್ತಿಯನ್ನು ಕಬಡಕೇರಿ ತಂಡದ ಜಲೀಲ್, ಅತ್ಯುತ್ತಮ ಅಟೇಕರ್ ಕಬಡಕೇರಿ ತಂಡದ ಹ್ಯಾರಿಸ್,ಅತ್ಯುತ್ತಮ ಆಲ್ ರೌಂಡರ್ ಲಿಮ್ರಾ ತಂಡದ ಕರೀಮ್,ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಕಬಡಕೇರಿ ತಂಡದ ಹಮೀದ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ಬೋಪಣ್ಣ,ಮಂಜು ಮೈತಾಡಿ, ಎಸ್.ಇ.ಎಸ್ ಅಧ್ಯಕ್ಷ ರಶೀದ್ ಪಿ.ಎಂ,ಬೇತ್ರಿ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಪಿ.ಎ.ಅಬ್ದುಲ್ ಹಮೀದ್ ಕಬಡಕೇರಿ, ಬೇತ್ರಿ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷಾದ ಅಬ್ದುಲ್ ಶಮೀರ್, ಹಾಗು ಎಸ್.ಇ.ಎಸ್ ಪದಾಧಿಕಾರಿಗಳು ಇದ್ದರು.