ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

Tegaltippi
Published on

ಕಲಬುರಗಿ: ನಾಡಿನ ನೆಲ ಮತ್ತು ಜಲ ಹಾಗೂ ಭಾಷೆ, ಸಂಸತಿಗೆ ಧಕ್ಕೆ ಬಂದಾಗ ಎಲ್ಲಾ ಕನ್ನಡಿಗರು ಒಂದಾಗಿರಬೇಕು ಎಂದು ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್​ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶೇಷ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡಿಗರ ಅಸ್ಮಿತೆಗೆ ಕಿಂಚಿತ್ತು ಧಕ್ಕೆಯಾಗಬಾರದು. ಮಾತೃಭಾಷೆಯೇ ನಮಗೆಲ್ಲ ಸ್ಪರ‍್ತಿ. ಜತೆಗೆ ಹೃದಯ ಶ್ರೀಮಂತಿಕೆ ಹೆಚ್ಚಿಸುತ್ತದೆ. ಇತ್ತೀಚಿಗೆ ಕಾಶ್ಮೀರ ಭಯೋತ್ಪಾದಕರ ದಾಳಿಯಿಂದ ಕನ್ನಡಿಗರಿಬ್ಬರು ಜೀವ ಕಳೆದು ಕೊಂಡಿದ್ದಾರೆ. ಈ ಸಂದಿಗ್ಧ ಸನ್ನಿವೇಶದಲ್ಲಿ ಕನ್ನಡಿಗರ ಹೃದಯವಂತಿಕೆ, ಭಾಷಾಭಿಮಾನ ಹಾಗೂ ಪರಸ್ಪರ ಸಹಕಾರ ಮನೋಭಾವ ಹೆಚ್ಚಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡಿಗರ ಸೇವಾ ಕರ‍್ಯ ಹಾಗೂ ಕನ್ನಡ ಕಟ್ಟುವ ಕಾಯಕ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ಮಾತನಾಡಿ, ಕನ್ನಡ ಕಳಕಳಿಯುಳ್ಳವರು ಯಾವುದೇ ತರಗತಿ ಇರಲಿ, ಮಕ್ಕಳನ್ನು ಜಾತಿ&ರ‍್ಮಗಳ ಗೋಡೆಯಿಂದ ನೋಡಬಾರದು. ತಂದೆ&ತಾಯಿ, ವಿದ್ಯಾ ಗುರುಗಳ ಮೇಲೆ ನಂಬಿಕೆಯನ್ನಿಟ್ಟು ಯಶಸ್ವಿ ಕರ‍್ಯ ಕೈಗೊಳ್ಳಬೇಕು. ವಿದ್ಯರ‍್ಥಿಗಳಲ್ಲಿ ಆತ್ಮವಿಶ್ವಾಸ ಮುಖ್ಯ. ಭಯ ಇಲ್ಲದೆ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಮಾತನಾಡಿ, ನೆಲ&ಜಲದ ಪ್ರಶ್ನೆ ಎದುರಾದಾಗ ಯಾರೂ ಪ್ರಶ್ನೆ ಮಾಡದೇ ಒಂದಾಗಿ ಹಕ್ಕಿನ ಸಲುವಾಗಿ ಹೋರಾಟ ಮಾಡಬೇಕಿದೆ. ಜಿಲ್ಲೆಯಲ್ಲಿ ಸಾಂಸತಿಕ ವಾತಾವರಣ ಮೂಡಿಸುವುದರ ಜತೆಗೆ ಹೊಸ ಮುಖಗಳಿಗೆ ಪರಿಷತ್ತು ಆದ್ಯತೆ ಕೊಡುತ್ತಿರುವುದು ಅವರಲ್ಲಿನ ಪ್ರತಿಭಾ ಅನಾವರಣಕ್ಕೆ ಅವಕಾಶ ಮಾಡಿಕೊಡುತ್ತಿದೆ ಎಂದರು.

ಹಿರಿಯ ಸಾಹಿತಿ ಡಾ.ನಾಗಾಬಾಯಿ ಬುಳ್ಳಾ,ಪದವಿಪರ‍್ವ ಶಿಕ್ಷಣ ಇಲಾಖೆಯ ಉಪ ನರ‍್ದೇಶಕ ಸುರೇಶ ಅಕ್ಕಣ್ಣಾ, ಗುರೂಜಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಜಿಲ್ಲಾ ಕಸಾಪ ಕರ‍್ಯರ‍್ಶಿಗಳಾದ ಶಿವರಾಜ ಅಂಡಗಿ, ರ‍್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ ಮಾತನಾಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯ ಸಾಹಿತಿಗಳಾದ ಡಾ.ನಾಗಾಬಾಯಿ ಬುಳ್ಳಾ, ಸಿದ್ಧರಾಮ ಪೊಲೀಸ್​ ಪಾಟೀಲ, ಡಾ. ಕಲ್ಯಾಣರಾವ ಪಾಟೀಲ್​ ಅವರನ್ನು ಪರಿಷತ್ತಿನ ವತಿಯಿಂದ ವಿಶೇಷವಾಗಿ ಸತ್ಕರಿಸಲಾಯಿತು. ಕಸಾಪ ಹಿರಿಯ ಸದಸ್ಯರಾದ ರಾಚಪ್ಪ ಮುಗುಳಿ, ರೇವಪ್ಪ ಬೊಮ್ಮನ, ಸೈಯ್ಯದ್​ ನಜಿರುದ್ದೀನ್​ ಮುತ್ತವಲಿ, ಸುರೇಶ ಭರಣಿ, ಸೋಮಶೇಖರ ನಂದಿಧ್ವಜ, ಶಿವಾನಂದ ಮಠಪತಿ, ಕೆ.ಬಸವರಾಜ, ವಿಶ್ವ ಕಾಮರೆಡ್ಡಿ, ಮೈಲಾರಿ ಪೂಜಾರಿ ಅವರನ್ನೂ ಸತ್ಕರಿಸಲಾಯಿತು.

ಪ್ರಸಕ್ತ ಸಾಲಿನ ಪಿಯುಸಿ ದ್ವೀತಿಯ ರ‍್ಷದ ಪರೀೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯರ‍್ಥಿಗಳಿಗೆ ಇಲ್ಲಿನ ಗುರೂಜಿ ಪದವಿ ಕಾಲೇಜಿನ ಸಹಕಾರದೊಂದಿಗೆ ಪರಿಷತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net