ಕನ್ನಡಕ್ಕೆ ಕಂಟಕ ಬರದಂತೆ ಜಾಗೃತಿ ವಹಿಸಬೇಕಿದೆ

bkt-22-6
Published on

ಬಾಗಲಕೋಟೆ: ಕನ್ನಡ ಶಾಲೆಗಳಿಗ್ಗಿಂತ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಗರ ಪ್ರದೇಶದಂತೆ ನಮಗೂ ಬೇಕು ಅಂತ ಗ್ರಾಮೀಣ ಭಾಗದವರು ಒತ್ತಾಯವಾಗಿದೆ. ತೀರ ಇಂಗ್ಲೀಷ್ ಬೇಡವೇ ಬೇಡ ಅಂತ ಬಿಟ್ಟು ಬದುಕುವುದು ಸಾಧ್ಯವಿಲ್ಲ. ಇಂಗ್ಲೀಷಗೆ ಅಗ್ರ ಪೂಜೆ ನೀಡಿ ನಮ್ಮ ಭಾಷೆ, ಸಂಸ್ಕೃತಿ ವಿಮುಖರಾಗವುದರಿಂದ ತಬ್ಬಳಿಗಳಾಗುತ್ತೇವೆ. ಹೀಗಾಗಿ ಕನ್ನಡಕ್ಕೆ ಕಂಟಕ ಬರದಂತೆ ಎಚ್ಚರ ವಹಿಸಬೇಕಿದೆ ಎಂದು ಸಾಹಿತಿ ಡಾ.ವೈ.ಎಂ.ಯಾಕೋಳ್ಳಿ ಅಭಿಪ್ರಾಯಪಟ್ಟರು.

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆ ಬಗ್ಗೆ ಶಿಕ್ಷಣ ತಜ್ಞರು, ಆಳುವವರು ಕೂಡಿಕೊಂಡು ಚರ್ಚೆ ನಡೆಸಬೇಕಿದೆ. ಕನ್ನಡವನ್ನು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಉಳಿದೆಲ್ಲ ಸಮಸ್ಯೆಗಳಿಂದ ಇದು ಗಂಭೀರ ಸ್ವರೂಪವಾಗಿದೆ. ಎಚ್ಚರ ವಹಿಸದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮೃದು ಭಾಷೆಯಲ್ಲಿಯೇ ಎಚ್ಚರಿಕೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಕನ್ನಡ ಮಾದ್ಯಮಕ್ಕೆ ಮಕ್ಕಳು ಪ್ರವೇಶ ಪಡೆಯದೇ ಆಂಗ್ಮಮಾಧ್ಯಮದ ಎದುರು ಗುಂಪಾಗಿ ನಿಂತಿರುತ್ತಾರೆ. ನಿತ್ಯ ಸರ್ಕಾರ ಕೆಪಿಎಸ್ ಶಾಲೆಗಳನ್ನು, ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯುವ ಮಾತು ನಿತ್ಯವೂ ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಹಾಗಾದರೆ ಪಟ್ಟಣದಲ್ಲಿ ನಿಮ್ಮ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗಬೇಕೆ? ನಮ್ಮ ಮಕ್ಕಳೂ ಆಂಗ್ಲ ಮಾಧ್ಯಮ ಕಲಿಯುವುದು ಬೇಡವೇ? ಎಂಬ ಪ್ರಶ್ನೆಯಲ್ಲೂ ಸತ್ಯವಿದೆ. ಹಾಗಾದರೆ ಪರಿಹಾರ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಮ್ಮೇಳನಗಳಲ್ಲಿ ಪ್ರಸ್ತಾಪಿಸಲಾದ ಮನವಿಗಳು, ಮಂಡನೆಯಾದ ಬೇಡಿಕೆಗಳು ಈಡೇರದ ಹೊರತು ಹೊಸ ಬೇಡಿಕೆಗಳಿಗೆ ಅರ್ಥವೇ ಇಲ್ಲ. ಚರ್ಚೆಯಾದರೂ ಆಗುತ್ತದಲ್ಲ ಎಂಬ ಸಕಾರಾತ್ಮಕ ಭಾವದೊಂದಿಗೆ ನಾವು ಮುನ್ನಡಿಯಿಡಬೇಕಾಗುತ್ತದೆ ಎಂದು

ಎಲ್ಲ ಕಡೆ ಅರೆಕಾಲಿಕ, ಗೌರವ ಶಿಕ್ಷಕರು ತುಂಬಿರುವುದರಿAದ ಅವರಿಗೂ ಖಾಯಂ ನೇಮಕಾತಿಗಳೇ ಇಲ್ಲವಾಗಿವೆ. ಕನ್ನಡ ಜನರ ಬದುಕು ಹಸನಾಗಲಿ, ಭಾಷೆ ಸಮೃದ್ಧವಾಗಲಿ ಎಂದು ಇಲ್ಲಿ ರಚಿಸಲ್ಪಟ್ಟ, ಮಹಾಜನ ವರದಿ, ಸರೋಜಿನಿ ಮಹಿಷಿ ವರದಿ, ಡಿ.ಎಂ.ನAಜುAಡಪ್ಪ ವರದಿ ಇವಾವವೂ ಸಂಪೂರ್ಣವಾಗಿ ಜಾರಿಯಾಗಲಿಲ್ಲ. ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ದೊರೆತರೂ ಪರಿಣಾಮಕಾರಿಯಾಗಿ ಚಟುವಟಿಕೆಗಳು ನಡೆಯುತ್ತಿಲ್ಲ. ಗಡಿ ಹಂಚಿಕೆ, ನೀರಿನ ಹಂಚಿಕೆ ತಕರಾರರುಗಳು ಇನ್ನೂ ಬಗೆಹರಿದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

===========

ವೈ.ಎಂ.ಯಾಕೋಳ್ಳಿ ಸಮ್ಮೇಳಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net