ಕನ್ನಡ ಸಾಹಿತ್ಯ ಪರಿಷತ್ ಐಗೂರು ಘಟಕದ ಸಭೆ

03SPT01
Published on

ಸೋಮವಾರಪೇಟೆ: ಕನ್ನಡ ಸಾಹಿತ್ಯ ಪರಿಷತ್ ಐಗೂರು ಘಟಕದ ಸಭೆ ಕಾಜೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾವೇರಿ ಸಭಾಂಗಣದಲ್ಲಿ ಇತ್ತೀಚೆಗೆ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.


ಐಗೂರು ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಕೊಠಡಿಯನ್ನು ಕೇಳುವಂತೆ ತೀರ್ಮಾನಿಸಿತು. ಸಾಹಿತ್ಯ ಪರಿಷತ್ ನಲ್ಲಿ ಸದಸ್ಯರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು, ದತ್ತಿ ಕಾರ್ಯಕ್ರಮ ಆಯೋಜಿಸುವುದು, ಐಗೂರಿನಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಯೋಜನೆ ರೂಪಿಸುವ ಬಗ್ಗೆ ತೀರ್ಮಾನಿಸಲಾಯಿತು.ಮುಖಂಡರಾದ ಕೆ.ಪಿ.ದಿನೇಶ್, ಧರ್ಮಪ್ಪ, ಸರಳಕುಮಾರಿ, ಹೋಬಳಿ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ವಿಶ್ವನಾಥರಾಜೇ ಅರಸ್, ಕೋಶಾಧಿಕಾರಿ ಎಸ್.ಎಂ.ಬೆಳ್ಳಿಯಪ್ಪ, ಸದಸ್ಯರಾದ ಮಚ್ಚಂಡ ಅಶೋಕ್, ತಿಮ್ಮಯ್ಯ, ವಾಸುದೇವ, ಅಜಿತ್ ಕುಮಾರ್, ಧನ್ಯಾ, ಆಶಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net