ಕನ್ನಡ ಬದುಕಿನ ಭಾಷೆಯಾಗಲಿ

bkt-29-1.
ಬಾಗಲಕೋಟೆ ತಾಲೂಕಿನ ಹಳ್ಳೂರು ಗ್ರಾಮದ ಬಸವೇಶ್ವರ ಮಂಗಳ ಭವನದಲ್ಲಿ ಸೋಮವಾರ ಬಾಗಲಕೋಟೆಯ ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಸ್ಥಳಿಯ ಬಸವೇಶ್ವರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಕ್ಕಳು ಸಿದ್ದಪಡಿಸಿದ ಚಿತ್ರಕಲೆ, ಕರಕುಶಲ ಕಲೆ ಸಾಹಿತಿ ಗುರುಸ್ವಾಮಿ ಗಣಾಚಾರಿ, ಹಿರಿಯ ಸಾಹಿತಿ ಎಸ್.ಜಿ.ಕೋಟಿ ಉದ್ಘಾಟಿಸಿದರು.
Published on

ಬಾಗಲಕೋಟೆ: ಕನ್ನಡ ಭಾಷೆಯನ್ನು ಬದುಕಿಸಿ ನಾವು ಬದುಕಬೇಕಿದೆ. ಕನ್ನಡದ ಹಿತದಲ್ಲಿ ನಮ್ಮ ಹಿತವಿದೆ ಎಂಬುದನ್ನು ಅರಿತು ಭಾಷೆಯನ್ನು ಉಳಿಸಿ, ಬೆಳೆಸುವ ತವಕತೆ ನಮಗಿರಬೇಕು ಎಂದು ಸಾಹಿತಿ ಸಮ್ಮೇಳದ ಸರ್ವಾಧ್ಯಕ್ಷ ಗುರುಸ್ವಾಮಿ ಗಣಾಚಾರಿ ಹೇಳಿದರು.

ತಾಲೂಕಿನ ಹಳ್ಳೂರು ಗ್ರಾಮದ ಬಸವೇಶ್ವರ ಮಂಗಳ ಭವನದಲ್ಲಿ ಸೋಮವಾರ ಬಾಗಲಕೋಟೆಯ ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಸ್ಥಳಿಯ ಬಸವೇಶ್ವರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡದಹಿತ ಕಾಯುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು, ಪತ್ರಿಕೋದ್ಯಮ, ದೃಶ್ಯ ಮಾಧ್ಯಮಗಳು ಹಾಗೂ ಸಮಸ್ತ ಕನ್ನಡಿಗರು ಟೊಂಕಕಟ್ಟಿ ನಿಲ್ಲಬೇಕು ಎಂದರು.

ಭಾಷೆಯ ವಿಚಾರ ಬಂದಾಗ ಭಾವುಕರಾಗದೇ, ಸದ್ವಿವಿವೇಕ, ಸದ್ವಿನಯದ ಸೇವಕರಾಗೋಣ, ಜಾಗೃತರಾಗೋಣ. ಕನ್ನಡ ನಮ್ಮ ಬದುಕಿನ ಭಾಷೆಯಾದಾಗ ಮಾತ್ರ ಪರಭಾಷೆಯ ವ್ಯಾಮೋಹ ತಗ್ಗುತ್ತದೆ. ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಕನ್ನಡ ಭಾಷೆ ಬಳಸುವಂತಾಗಲು ಭಾಷಾ ತಜ್ಞರು ಮುಂದಾಗಬೇಕಿದೆ ಎಂದು ಹೇಳಿದರು.

ಸಮ್ಮೇಳನದ ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್.ಜಿ.ಕೋಟಿ, ಸಾಹಿತ್ಯ, ಸಾಂಸ್ಕೃತಿಕ ಸಂಬಂಽತ ಸಮ್ಮೇಳನಗಳಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆಯಬೇಕು. ಹಳ್ಳೂರ ಗ್ರಾಮದ ಐತಿಹಾಸಿಕ ಮಹತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು ಎಂದರು.

ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಬಿ.ಎಸ್.ಮೇಟಿ ಮಾತನಾಡಿದರು. ಶಿಕ್ಷಕ ಎಚ್.ಎಸ್.ಕಾಳಿ ಪ್ರಾಸ್ತಾವಿಕ ನುಡಿ ಹೇಳಿದರು. ಜನಪದ ಸಾಹಿತಿ ಸಿದ್ದಪ್ಪ ಬಿದರಿ ಜನಪದ ಹಾಡು ಹೇಳಿ ರಂಜಿಸಿದರು. ಅಂಗನವಾಡಿ ಹಾಗೂ ಶಾಲಾ ಮಕ್ಕಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಾಗರಾಜ ಹೊನ್ನುಟಗಿ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಸಂಘದ ಅಧ್ಯಕ್ಷ ಮಹಾಂತೇಶ ಮಣಿನಾಗರ, ಉಪಾಧ್ಯಕ್ಷ ವಿನೋದ ಮೇಟಿ, ಗ್ರಾಪಂ ಉಪಾಧ್ಯಕ್ಷ ಸುರೇಶ ಕುರಿ, ಬಸವರಾಜ ಮೇಟಿ, ಆರ್.ಬಿ.ರಾಂಪುರ, ಬಸವರಾಜ ಅಥಣಿ, ದ್ಯಾವಪ್ಪ ಮೇಟಿ, ರಮೇಶ ಮಾಯಪ್ಪನವರ, ಶಿವಾನಂದ ಆದಾಪೂರ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net