ಕನ್ನಡ ಪದವೀಧರರಿಗೆ ಇವೆ ಹೇರಳ ಅವಕಾಶ

bkt-9-1
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ವೇದಿಕೆ ಕಾರ್ಯಚಟುವಟಿಕೆಗಳ ಮುಕ್ತಾಯ ಹಾಗೂ ಕನ್ನಡ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ರಾಜ್ಯಶಾಸ್ತçದ ಪ್ರಾಧ್ಯಾಪಕ ಡಾ.ಎ.ಯು. ರಾಠೋಡ ಮಾತನಾಡಿದರು.
Published on

ಬಾಗಲಕೋಟೆ: ಶಿಕ್ಷಣ ನಿಂತ ನೀರಲ್ಲ ಜೀವನದುದ್ದಕ್ಕೂ ನಡೆಯುವ ಪ್ರಕ್ರಿಯೆ. ಸ್ನಾತಕೋತ್ತರದ ಬೀಳ್ಕೊಡುಗೆ ಜೀವನದ ಮುಂದಿನ ಘಟ್ಟದ ನಿರ್ಧಾರ ಕೈಗೊಳ್ಳುವ ಹಂತ. ಮೌಲ್ಯಯುತ ಜೀವನಕ್ಕಾಗಿ ನಿಽðಷ್ಟ ಗುರಿ ಇರಬೇಕು ಎಂದು ರಾಜ್ಯಶಾಸ್ತçದ ಪ್ರಾಧ್ಯಾಪಕ ಡಾ.ಎ.ಯು. ರಾಠೋಡ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ವೇದಿಕೆ ಕಾರ್ಯಚಟುವಟಿಕೆಗಳ ಮುಕ್ತಾಯ ಹಾಗೂ ಕನ್ನಡ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ಅವರು ಮಾತನಾಡಿದರು.

ಸ್ನಾತಕೋತ್ತರದ ನಂತರ ಪಿ.ಎಚ್.ಡಿ ಹೊರತು ಪಡಿಸಿ ಹೇರಳ ಅವಕಾಶಗಳಿವೆ. ಸೆಟ್, ನೆಟ್, ಜಿಆರ್.ಎಫ್, ರಾಜೀವ ಗಾಂಽ ಫಿಲೋಸಿಪ್ ನಂತಹ ಪರೀಕ್ಷೆಗಳತ್ತ ಗಮನ ಹರಿಸಬೇಕು. ಹಲವಾರು ವಿವಿಗಳು ಸಂಶೋಧನೆಗಾಗಿ ಕೇಂದ್ರದಿAದ ಸಂಶೋಧನಾ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಯೋಜನೆ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳವ ಕೆಲಸ ಮಾಡಬೇಕು ಎಂದರು.

ಕನ್ನಡ ವಿಭಾಗಕ್ಕೆ ಅಂತರಾಜ್ಯದಲ್ಲಿಯೂ ಬೇಡಿಕೆಗಳಿದ್ದು ಅದನ್ನು ಹುಡುಕಬೇಕು. ದೃಢ ನಿರ್ಧಾರ ಮತ್ತು ಕನಸುಗಳನ್ನು ಬೆನ್ನಟ್ಟಿ ಅಲ್ಪಾವಽ ಕೆಸಗಳಲ್ಲಿ ಕಾಲಹರಣ ಬೇಡ. ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಿದ್ದರೂ ಸಂಶೋಧನಾ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ. ಆದ್ದರಿಂದ ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಅವಕಾಶ ಮತ್ತು ಸೌಲಭ್ಯಗಳಿದ್ದು ಅವುಗಳತ್ತ ಗಮನಹರಿಸಬೇಕು. ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಂಶೋಧನಾ ಕೇಂದ್ರವಿದ್ದು, ಈ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಮಾತನಾಡಿ, ಪ್ರತಿಭೆ ಎನ್ನುವುದು ಬೆಳಕಿನ ಪರ್ವತ ಇದ್ದ ಹಾಗೆ ಅದರ ಮೇಲೆ ದೂಳು ಕೂರದಂತೆ ನೋಡಿಕೊಳ್ಳಬೇಕು. ಅಧ್ಯಯನಕ್ಕೆ ವಿಶ್ರಾಂತಿ ಇಲ್ಲ ಅದು ಉಸಿರಾಟದ ಪ್ರಕ್ರಿಯೆ ಇದ್ದಂತೆ. ನಿರಂತರ ಚಟುವಟಿಕೆ, ಭಾಷಾ ಕೌಶಲ ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಸಾಧನೆ ಗುರುವಿಗೆ ಸಂತೋಷ ನೀಡುತ್ತದೆ. ನಡೆಯುವವರೇ ಎಡುವಲು ಸಾಧ್ಯ, ಆದ್ದರಿಂದ ಸೋಲುಗಳು ನಮ್ಮನ್ನು ದೃಢವಾಗಿಸುತ್ತವೆ. ಇದರಿಂದ ಗೆಲವು ಸಾಧ್ಯ. ಸಂತೃಪ್ತ ಭಾವ ಕೌಶಲಗಳನ್ನು ಮಸುಕಗೊಳಿಸುತ್ತದೆ ಕೊರತೆ ಮತ್ತು ಹಸಿವು ಗುರಿಯಕಡೆ ಗಮನವನ್ನು ಕೇಂದ್ರಿಕರಿಸುತ್ತದೆ. ಅವಕಾಶಗಳನ್ನು ನಿರಂತರವಾಗಿ ಹುಡುಕುವ ಕೆಲಸ ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ವೀಣಾ ಕಲ್ಮಠ, ಡಾ.ಬಸವರಾಜ ಕುಂಬಾರ, ಡಾ.ಶ್ರೀಹರಿ ದೂಪದ್, ಪ್ರಾ. ವ್ಹಿ.ಎಸ್ ಚಿಗರಿ, ಬೀಳಗಿ ಮಹಾವಿದ್ಯಾಲಯದ ಪ್ರಾ. ಸಂಪತ್ ಲಮಾಣಿ ಸೇರಿದಂತೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net