ಕದಳಿ ಸಿರಿ ಆಸ್ಪತ್ರೆ ಉದ್ಘಾಟನೆ ಇಂದು

IMG-20230810-WA0060
Published on


ಕಲಬುರಗಿ : ನಗರದ ಕೋರ್ಟ್ ರಸ್ತೆಯಲಿರುವ  ಎಸ್.ಬಿ.ಪಾಟೀಲ್ ಬಂಕ್ ಬಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕದಳಿ ಸಿರಿ  ಆಸ್ಪತ್ರೆ ಉದ್ಘಾಟನಾ ಸಮಾರಂಭ ಆ.೧೧ ರಂದು ಬೆಳಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಡಾ.ಭಾಗ್ಯಶ್ರೀ ಪಾಟೀಲ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.  ಸಚಿವರಾದ ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ. ಶರಣಬಸಪ್ಪ ದರ್ಶನಾಪುರ, ರಹಿಮ್‌ಖಾನ್, ಶಾಸಕರಾದ ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ, ಡಾ.ಅಜಯಸಿಂಗ್, ಕನ್ನಿಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿಗಳಾದ ಚಂದ್ರಶೇಖರ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಇತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net