

ಬಾಗಲಕೋಟೆ: ತ್ರಿಬಲ್ ರೈಡ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ತಡೆದು ದಂಡ ವಿಽಸಿದ ಮಹಿಳಾ ಪಿಎಸ್‌ಐ ಎದುರು ಕಾಲೇಜ್ ವಿದ್ಯಾರ್ಥಿ ಕಾಲೇಜ್ ಗೆ ಕಟ್ಟುವ ಶುಲ್ಕ ಇದು ಎಂದು ಬಿಕ್ಕಿ ಬಿಕ್ಕಿ ಅಳುವುದನ್ನು ನೋಡಲಾಗದೇ ಮನಕರುಗಿ ವಿದ್ಯಾರ್ಥಿಗೆ ಹಣವನ್ನು ವಾಪಸ್ಸು ಕೊಟ್ಟು ಆತನಿಗೆ ಸಮಧಾನ ಪಡಿಸಿದ ಮನಕಲಕುವ ಘಟನೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ನಡೆದಿದೆ.
ನಗರ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ್ ಎನ್ನುವ ಮಹಿಳಾ ಅಽಕಾರಿ ಇಳಕಲ್ಲ ನಗರದಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂöಸುತ್ತಿದ್ದವರನ್ನ ತಡೆದು ದಂಡ ಹಾಕುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡಿಕೊಂಡು ಬಂದವರ ಬೈಕ್ ನಿಲ್ಲಿಸಿ, ದಾಖಲೆ ಕೇಳಿದರು.
ಈ ವೇಳೆ ಚಾಲನಾ ಪರವಾಣಿಗೆ ಇಲ್ಲದೇ ತ್ರಿಬಲ್ ರೈಡ್ ಮಾಡುತ್ತಿರುವುದನ್ನು ಕಂಡು ದಂಡ ವಿಽಸಿದರು. ಅದರಲ್ಲಿ ಓರ್ವ ಕಾಲೇಜ್ ವಿದ್ಯಾರ್ಥಿ ತನ್ನ ಬಳಿ ಇದ್ದ ಹಣದಿಂದ ದಂಡ ಕಟ್ಟಿದ. ಆದರೆ, ಸ್ಥಳದಿಂದ ನಿರ್ಗಮಿಸದೇ ಅಲ್ಲಿಯೇ ಬಿಕ್ಕಿ ಬಿಕ್ಕಿ ಅಳುತ್ತ ನಿಂತಿದ್ದನ್ನು ಗಮನಿಸಿ ಪಿಎಸ್‌ಐ ಕಾರಣ ಕೇಳಿದರು.
ಆಗ ನಾನು ಕಾಲೇಜ್ ಶುಲ್ಕ ಕಟ್ಟಲು ಮನೆಯಲ್ಲಿ ದುಡ್ಡುಕೊಟ್ಟಿದ್ದರು. ಇದೀಗ ನನಗೆ ಫೀ ಕಟ್ಟಲು ಹಣ ಇಲ್ಲ. ಮನೆಯಲ್ಲಿ ತಿಳಿದರೆ ಮನೆಯಲ್ಲಿ ಹೊಡೆಯುತ್ತಾರೆ ಎಂದು ಕಣ್ಣೀರು ಹಾಕಿದ. ವಿದ್ಯಾರ್ಥಿಯ ಕಣ್ಣೀರು ನೋಡಲಾಗದೇ ಮನಕರುಗಿದ ಮಹಿಳಾ ಪಿಎಸ್‌ಐ ನಾಯಕ್ ಅವರು, ತಕ್ಷಣವೇ ತನ್ನ ಪಾಕೇಟ್ ನಿಂದ ದಂಡ ವಿಧಿಸಿದ್ದ ಇನ್ನೂರು ರೂಪಾಯಿಯನ್ನು ಆ ವಿದ್ಯಾರ್ಥಿಯ ಜೇಬಿಗೆ ಇಟ್ಟರು. ವಿದ್ಯಾರ್ಥಿಯನ್ನು ಮಗನಂತೆ ಅಪ್ಪಿಕೊಂಡು ಆತನನ್ನು ಸಂತೈಸಿ, ಧೈರ್ಯ ತುಂಬಿ, ಚನ್ನಾಗಿ ಓದು, ಹೀಗೆ ಸಂಚಾರಿ ನಿಯಮ ಉಲ್ಲಂöಸಬಾರದು ಎಂದು ತಿಳಿಹೇಳಿ, ಧೈರ್ಯ ತುಂಬಿಸಿದರು.
ಈ ಘಟನೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಯಾರೋ ಸೆರೆ ಹಿಡಿದಿದ್ದು, ಇದೀಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಮಹಿಳಾ ಪಿಎಸ್‌ಐ ನಾಯಕ್ ಅವರ ಈ ಮಾನವೀಯತೆ ನಡೆಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.