ಕಣ್ಣೀರಿಟ್ಟ ಹಿರಿಯ ಜೀವಿಗಳು

21 vikram 2
Published on

ಧಾರವಾಡ: ತುಪ್ಪರಿ ಹಳ್ಳದ ಪ್ರವಾಹದಲ್ಲಿ ತೇಲಿಹೋದ ತಾಲೂಕಿನ ಹಾರೋಬೆಳವಡಿ ರೈತ ಮಡಿವಾಳಪ್ಪ ಜಕ್ಕಣ್ಣವರ ಕುಟುಂಬಕ್ಕೆ ಸರ್ಕಾರ, ಜಿಲ್ಲಾಡಳಿತ ಈವರೆಗೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಲೇ ಕಾಲ ಕಳೆಯುವಂತಾಗಿದೆ.

ಮಡಿವಾಳಪ್ಪ ಅವರೇ ಕುಟುಂಬಕ್ಕೆ ಆಸರೆಯಾಗಿದ್ದರು. ಆತನೇ ನೀರಿನಲ್ಲಿ ಕೊಚ್ಚಿಹೋದ ಹಿನ್ನೆಲೆಯಲ್ಲಿ ಆತನ ತಂದೆ ನಾಗಪ್ಪ, ತಾಯಿ ಬಸವ್ವ ಒಂದು ದಿನದ ಊಟಕ್ಕೂ ಪರದಾಡುವಂತಾಗಿದೆ.

ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡ ಹಿರಿಯ ಜೀವಿಗಳು, ದುಡಿದು ಮನೆ ನಡೆಸುತ್ತಿದ್ದ ಮಗನೂ ಇಲ್ಲ. ಇತ್ತ ಸರ್ಕಾರವೂ ಸೂಕ್ತ ಪರಿಹಾರ ನೀಡಿಲ್ಲ. ಸರ್ಕಾರ ನಮ್ಮ ಪರಿಸ್ಥಿತಿ ಗಮನಿಸಿ, ಒಂದು ತುತ್ತಿಗೆ ಆಗುವಷ್ಟು ಪರಿಹಾರ ನೀಡಿದರೆ ಸಾಕು ಎಂದು ಕಣ್ಣೀರು ಹಾಕಿದರು.

ಮಡಿವಾಳಪ್ಪ ಜೂ. 29ರಂದು ದನ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ತುಪ್ಪರಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ. ಆತ ನೀರಿನ ಸೆಳವಿಗೆ ಸಿಕ್ಕು ತೇಲಿ ಹೋಗುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ಅಂದಿನಿಂದ ಅಂದಾಜು 8 ದಿನಗಳ ಕಾಲ ಎನ್​ಡಿಆರ್​ಎಫ್ ತಂಡ ಆತನ ಮೃತದೇಹ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಕೊನೆಗೆ ಅವರ ಸಂಬಂಧಿಕರು ನಾಪತ್ತೆಯಾಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಘಟನೆ ನಡೆದು ಎರಡು ತಿಂಗಳ ಸಮೀಪಿಸಿದರೂ ಆತನ ಸುಳಿವೂ ಇಲ್ಲ. ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಅವರ ಕುಟುಂಬಕ್ಕೆ ಸಹಾಯ ಮಾಡುವ ಕೆಲಸ ಮಾಡಿಲ್ಲ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net