

ವಿರಾಜಪೇಟೆ: ವಿರಾಜಪೇಟೆ ಕೊಡವ ಸಮಾಜ ಮತ್ತು ಲೋಪಮುದ್ರ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಸೋಮವಾರ ಕಣ್ಣಿನ ತಪಾಸಣಾ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು.
ಲೋಪಮುದ್ರ ದೃಷ್ಟಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸೌಮ್ಯಾ ಗಣೇಶ್ ನಾಣಯ್ಯ ಮಾತನಾಡಿ, ಕಣ್ಣಿನ ತೊಂದರೆ ಇರುವವರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡುತ್ತಿದ್ದೇವೆ. ಹೆಚ್ಚಿನ ಜನರಿಗೆ ಕಣ್ಣಿನ ತೊಂದರೆಯ ಬಗ್ಗೆ ತಿಳಿದಿರುವುದಿಲ್ಲ, ಬಿಪಿ, ಶುಗರ್ ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದರೆ ಕಣ್ಣಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುವುದು ತಿಳಿದಿರುವುದಿಲ್ಲ. ಆದ್ದರಿಂದ ಸ್ಕ್ರೀನಿಂಗ್ ಟೆಸ್ಟ್ ಬಹಳ ಮುಖ್ಯವಾಗಿದೆ ಎಂದರು.
ಕೊಡವ ಸಮಾಜ ಅಧ್ಯಕ್ಷ ಕುಂಬೇರ ಎ.ಮನು ಕುಮಾರ್ ಮಾತನಾಡಿ,
ಸಾರ್ವಜನಿಕರು ಈ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕೊಡವ ಸಮಾಜ ವಿರಾಜಪೇಟೆಯ ಗೌರವ ಕಾರ್ಯದರ್ಶಿ ಮಾಲೆಟಿರ ಶ್ರೀನಿವಾಸ್ ಮಾತನಾಡಿ, ಬಡ ಮತ್ತು ಮಧ್ಯಮ ಹಾಗೂ ಸಾರ್ವಜನಿಕರೆಲ್ಲರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಜಂಟಿ ಆಶ್ರಯದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ತ್ರಿವೇಣಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಪುಟ್ಟಿಚಂಡ ನವೀನ್, ಮತ್ತು ಕೊಡವ ಸಮಾಜ ವಿರಾಜಪೇಟೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಲೋಪಮುದ್ರಾ ದೃಷ್ಟಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.