

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಅಂಬಿಕಾ ಶ್ರೀಧರ್ ಅವಿರೋಧ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಂಬಿಕಾ ಶ್ರೀಧರ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎನ್.ಕೆ ನವೀನ್ ಘೋಷಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷೆ ಮಣಿ ಮಹದೇವ್, ಸದಸ್ಯರಾದ ಡಿ.ಕೆ. ನಟೇಶ್ ಕುಮಾರಶೆಟ್ಟಿ, ಆನಂದ್, ತ್ಯಾಗರಾಜು, ರವಿ, ಮೈಮುನೀಸಾ, ರೇಣುಕಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್, ಬಿಲ್ ಕಲೆಕ್ಟರ್ ಪಾಂಡು, ಗ್ರಾಪಂ ಸದಸ್ಯ ಕುಮಾರಶೆಟ್ಟಿ, ಮಾಜಿ ಅಧ್ಯಕ್ಷ ಡಿ.ಕೆ.ನಟೇಶ್ ಇದ್ದರು.