ಕಡವಿನಕಟ್ಟೆ ಸ್ವಾಗತ ಗೋಪುರ ನಿರ್ವಣಕ್ಕೆ ಭೂಮಿ ಪೂಜೆ ನಾಳೆ

3bkl1
Published on

ಭಟ್ಕಳ: ಪುರಾಣ ಪ್ರಸಿದ್ಧ ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗರ ರಸ್ತೆಯ ತಿರುವಿನಲ್ಲಿ ಬೃಹತ್ ಸ್ವಾಗತ ಗೋಪುರ ನಿರ್ವಿುಸಲು ತೀರ್ವನಿಸಿದ್ದು ಸುಮಾರು 14.50 ಲಕ್ಷ ರೂ. ವೆಚ್ಚದಲ್ಲಿ ಸ್ವಾಗತ ಗೋಪುರ ನಿರ್ವಣಕ್ಕೆ ಡಿ.5ರಂದು ಭೂಮಿ ಪೂಜೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಸುನೀಲ ನಾಯ್ಕ, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಭರತ್ ಎಸ್., ಉಪಸ್ಥಿತರಿರುವರು.

ಹಲವಾರು ವರ್ಷಗಳಿಂದ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಗಿದ್ದು, ಪ್ರತಿದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಹರಕೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಭಟ್ಕಳ ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ದೇವಸ್ಥಾನಕ್ಕೆ ಸಾಗರ ರಸ್ತೆಯ ಮೂಲಕ ಸಾಗಿ ಹೋಗಬೇಕಾಗಿದೆ. ಅನೇಕ ಭಕ್ತ ಜನರು ಸಾಗರ ರಸ್ತೆಯ ತಿರುವಿನಲ್ಲಿ ದೇವಾಲಯದ ರಸ್ತೆಯನ್ನು ತಲುಪಲು ಸ್ವಲ್ಪ ಸಮಸ್ಯೆಯಾಗುವುದನ್ನು ಹೇಳಿಕೊಂಡಿದ್ದೇ ಇಂದು ಬೃಹತ್ ಸ್ವಾಗತ ಗೋಪುರ ನಿರ್ವಣಕ್ಕೆ ನಾಂದಿಯಾಯಿತು. ಮಂಗಳೂರಿನ ಆರ್ಕಿಟೆಕ್ ವಾಸುದೇವ ನಾಗೇಶ್ ಶೇಟ್ ನೀಲಿನಕ್ಷೆ ತಯಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net