ಕಡಲೆ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ

b03e792d-df4f-4a35-821a-5aa0a560e60a
Published on

ಬಾಗಲಕೋಟೆ: ಕಡಲೆ ಬೆಳೆಯು ಜಿಲ್ಲೆಯ ಒಂದು ಪ್ರಮುಖ ದ್ವಿದಳಧಾನ್ಯ ಬೆಳೆಯಾಗಿದ್ದು, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 104136 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣವಿದ್ದು ಕಡಲೆ ಬೆಳೆಯಲ್ಲಿ ಕಾಯಿಕೊರಕ (ಹೆಲಿಕೋವರ್ಪಾ) ಹುಳುವಿನ ಬಾಧೆ ಕಂಡುಬರುವ ಸಂಭವವಿರುತ್ತದೆ. ರೈತರು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

ಕಾಯಿಕೊರಕದ ಪತಂಗ ತನ್ನ ಜೀವಿತಾವಧಿಯಲ್ಲಿ ಸುಮಾರು 500-1000 ತತ್ತಿಗಳನ್ನು ಒಂದೊಂದೆ ಬಿಡಿ ಬಿಡಿಯಾಗಿ ಎಲೆ, ಮೊಗ್ಗು, ಹೂ ಮತ್ತು ಎಳೆ ಕಾಯಿಗಳ ಮೇಲೆ ಇಡುತ್ತದೆ. 2-5 ದಿನಗಳಲ್ಲಿ ತತ್ತಿಯಿಂದ ಮರಿ ಹುಳುಗಳು ಹೊರಗೆ ಬರುತ್ತವೆ. ಹೊರಗೆ ಬಂದ ಮರಿ ಕೀಡೆ ಸುಮಾರು 1-1.5 ಮಿಮೀ ಉದ್ದ ಗಾತ್ರವಿದ್ದು, ಮೊದಲಿಗೆ ತತ್ತಿಯ ಕವಚವನ್ನು ತಿಂದು ಬದುಕಲು ಆರಂಭಿಸುತ್ತದೆ, ತದನಂತರ ಕೀಡೆ ಮೊದನೆಯ ಹಂತ (1-3 ಮಿಮಿ), ಎರಡನೇಯ ಹಂತ (4-7 ಮಿಮಿ), ಮೂರನೇಯ ಹಂತ (8-13 ಮಿಮಿ), ನಾಲ್ಕನೆಯ ಹಂತ (14-23 ಮಿಮಿ), ಐದನೇಯ ಹಂತ (24-28 ಮಿಮಿ), ಆರನೇಯ ಹಂತ (29-30+ ಮಿಮಿ) ವರೆಗೆ ಬೆಳೆಯುತ್ತಾ ಎಲೆ, ಮೊಗ್ಗು, ಹೂ ಮತ್ತು ಕಾಯಿಗಳನ್ನು ತಿನ್ನುತ್ತದೆ, ನಂತರ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗಿ, ವಾತಾವರಣ ಹಾಗೂ ಆಹಾರ ಲಭ್ಯತೆ ಆಧಾರದ ಮೇಲೆ ಪತಂಗವಾಗಿ ಹೊರಗೆ ಬಂದು ತತ್ತಿಯನ್ನು ಇಡುತ್ತದೆ.

ಕಾಯಿಕೊರಕ (ಹೆಲಿಕೋವರ್ಪಾ) ನಿರ್ವಹಣೆ ಕ್ರಮಗಳು ಕಡಲೆ ಬೆಳೆಯಲ್ಲಿ ಕೀಡೆಯ ಆರ್ಥಿಕ ಮಟ್ಟ (ಇಛಿoಟಿomiಛಿ ಖಿhಡಿeshoಟಜ ಐeveಟ) ಅಂದರೆ ಪ್ರತಿ ಗಿಡದಲ್ಲಿ 2 ಕೀಡೆ ಅಥವಾ 5-8 ತತ್ತಿಗಳು ಕಂಡುಬಂದಲ್ಲಿ ಕೂಡಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮಾಗಿ ಉಳುಮೆ: ಬೇಸಿಗೆ ಕಾಲದಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಭೂಮಿಯಲ್ಲಿ ಇದ್ದ ಕೋಶಗಳು, ಹೊರಗೆ ಬಂದು ಸೂರ್ಯನ ಶಾಖದಿಂದ ಸಾಯುತ್ತವೆ ಅಲ್ಲದೇ ಮೇಲೆ ಬಂದ ಕೋಶಗಳನ್ನು ಹಕ್ಕಿಗಳು, ತಿನ್ನುವುದರಿಂದ ಕಾಯಿಕೊರಕದ ಸಂತತಿ ನಿಯಂತ್ರಿಸಬಹುದಾಗಿರುತ್ತದೆ. ಬೆಳೆ ಪರಿವರ್ತನೆ ಮಾಡುವುದರಿಂದ ನಿಯಂತ್ರಿಸಬಹುದು.
ಕಡಲೆಯಲ್ಲಿ ಜೋಳ ಮಿಶ್ರ ಬೆಳೆಯಾಗಿ ಪ್ರತಿ ಎಕರೆಗೆ 20 ಗ್ರಾಂ ಜೋಳದ ಬೀಜವನ್ನು ಕೂಡಿಸಿ ಬಿತ್ತುವುದರಿಂದ ಜೋಳದ ಬೆಳೆಯು ಹಕ್ಕಿಗಳಿಗೆ ಆಶ್ರಯವಾಗಿ ಕೀಡೆಗಳನ್ನು ತಿನ್ನುವುದರಿಂದ ಯಂತ್ರಿಸಬಹುದು. ಕಡಲೆ ಬೆಳೆ ಸುತ್ತಲೂ 1- 2 ಸಾಲು ¥ರÀತಂತ್ರ ಜೀವಿಗಳಿಗೆ ಆಶ್ರಯವಾಗುವಂತಹ ಹೂ ಬಿಡುವ ಗುರೆಳ್ಳು ಅಥವಾ ಕೋತಂಬರಿ ಬೆಳೆಯುವುದರಿಂದ ನೈಸರ್ಗಿಕವಾಗಿ ಕೀಡೆಯ ಬಾಧೆಯನ್ನು ನಿಯಂತ್ರಿಸಬಹುದು ಅಲ್ಲದೇ ಕಡಲೆ ಸುತ್ತಲೂ ಕಾವಲು ಬೆಳೆಯಾಗಿ 1-2 ಸಾಲು ಜೋಳ ಅಥವಾ ಮೆಕ್ಕೆಜೋಳ ಬೆಳೆಯುವುದರಿಂದ ಪತಂಗಗಳ ಚಲನೆಗೆ ಅಡ್ಡಿಯಾಗುವುದರಿಂದ ಬಾಧೆಯ ಪ್ರಮಾಣ ನಿಯಂತ್ರಿಸಬಹುದು ಅಥವಾ ಬಲೆ ಬೆಳೆಯಾಗಿ ಕಡಲೆ ಬೆಳೆ ಸುತ್ತಲೂ 1-2 ಸಾಲು ಬೆಂಡಿ ಬೆಳೆ ಹಾಕುವುದರಿಂದ ಕಾಯಿಕೊರಕದ ಪತಂಗಗಳು ಬೆಂಡೆ ಬೆಳೆಗಳ ಮೇಲೆ ತತ್ತಿಗಳನ್ನು ಇಡಲು ಹೆಚ್ಚಿಗೆÀ ಇಷ್ಟ ಪಡುತ್ತವೆ, ಸದರಿ ಬಲೆ ಬೆಳೆ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದರಿಂದ ಕೀಟದ ಬಾಧೆ ಹತೋಟಿ ಮಾಡಬಹುದಾಗಿದೆ.

:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net