

ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡು ಕಡಲ ತೀರದಲ್ಲಿ ಕಲ್ಲು ಬಂಡೆಗಳನ್ನು ಹಾಕುವ ಕಾರ್ಯಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಕಾಸರಕೋಡು ಇಕೋ ಬೀಚ್ ಎಂದು ಹೆಸರು ಪಡೆದಿದೆ. ಪರಿಸರ ಸ್ನೇಹಿ ಕಾರ್ಯಕ್ಕಾಗಿ ಅಂತಾರಾಷ್ಟ್ರೀಯ ಮನ್ನಣೆಯ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ ಪಡೆದಿದೆ. ಆದರೆ, ಇಲ್ಲಿ ಪರಿಸರ ವಿರೋಧಿ ಕಾರ್ಯ ನಡೆಯುತ್ತಿದೆ. ಕಡಲ ಆಮೆಗಳು ಮೊಟ್ಟೆ ಇಡುವ ತಾಣ ಕಾಸರಕೋಡಿನ ತೀರವಾಗಿದೆ. ಇಲ್ಲಿ ಇನ್ನೂ ಹಲವು ಜೀವ ವೈವಿಧ್ಯವಿದೆ. ಇಲ್ಲಿ ಕಲ್ಲು ಹಾಕುವುದು ಸಿಆರ್ರೆಡ್ ನಿಯಮದ ಉಲ್ಲಂಘನೆಯಾಗಿದೆ ಎಂದು ಕಡಲ ಜೀವಶಾಸ್ತ್ರಜ್ಞ ಡಾ. ಪ್ರಕಾಶ ಮೇಸ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಜಾಗದಲ್ಲಿ ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳದೆ ಕಾಮಗಾರಿ ನಡೆಸಿರುವುದು ಸರಿಯಲ್ಲ ಎಂದು ಸ್ಥಳೀಯರಾದ ಗಣಪತಿ ತಾಂಡೇಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಸರಕೋಡು ಕಡಲ ತೀರದಲ್ಲಿ ಬಂದರು ಇಲಾಖೆ ಕಾಮಗಾರಿ ನಡೆಸಿಲ್ಲ. ಖಾಸಗಿ ಕಂಪನಿ ಬಂದರು ನಿರ್ಮಾಣ ಕಾಮಗಾರಿ ನಡೆಸಿದೆ. ಅದನ್ನು ಜನ ತಡೆದಿದ್ದಾರೆ. ತಾರಾನಾಥ ರಾಠೋಡ ಬಂದರು ಇಲಾಖೆ ಇಇ