ಕಡಲ ತಡಿಗೆ ಬಂದು ಬಿದ್ದ ಆಮೆ

BKL-aame
Published on

ಭಟ್ಕಳ: ಮಾವಿನ ಕುರ್ವೆ ಬಂದರ್ ವ್ಯಾಪ್ತಿಯ ತಲಗೋಡ ಕಡಲ ತೀರದಲ್ಲಿ ಅಪರೂಪದ ಬೃಹತ್ ಗಾತ್ರದ ಆಮೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

ಆಮೆಯ ಕವಚದ ಮಾದರಿಯ ಹೊದಿಕೆ ಸ್ವಲ್ಪಮಟ್ಟಿಗೆ ಒಡೆದಿದೆ. ಮುಂದಿನ ಒಂದು ಕಾಲನ್ನು ಕೂಡ ಕಳೆದುಕೊಂಡಿದೆ. ಶುಕ್ರವಾರ ಮಧ್ಯಾಹ್ನದ ಹೊತ್ತಿನಲ್ಲಿ ದಡಕ್ಕೆ ಬಂದು ಬಿದ್ದಿದ ಆಮೆಯನ್ನು ಸ್ಥಳೀಯ ಯುವಕ ವಿನಾಯಕ ಖಾರ್ವಿ ರಕ್ಷಿಸಿದ್ದಾರೆ.

ಸಮುದ್ರಕ್ಕೆ ಬಿಟ್ಟರೂ ಆಮೆಗೆ ಈಜಲು ಸಾಧ್ಯವಾಗದೆ ಪದೇ ಪದೆ ದಡಕ್ಕೆ ಬಂದು ಬಿದ್ದಿದೆ. ನಂತರ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದೆ. ಕಡಲಾಮೆಯ ಪಾದ ಮತ್ತು ದೇಹದ ಭಾಗಗಳಿಗೆ ಗಾಯಗಳಾಗಿರುವುದರಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಸಂಬಂಧಿತ ವೈದ್ಯರ ಮೂಲಕ ಒಂದು ವಾರ ಚಿಕಿತ್ಸೆ ನೀಡಿ ನಂತರ ಕಡಲಿಗೆ ಬಿಡಲಿದ್ದೇವೆ ಎಂದು ಆರ್​ಎಫ್​ಒ ಸವಿತಾ ದೇವಾಡಿಗ ತಿಳಿಸಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net