

ಬಾಗಲಕೋಟೆ: ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಜೊತೆಗೆ ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡಲು ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಚೇರಿಗಳಲ್ಲಿ ಹಸಿರು ಶಿಷ್ಠಾಚಾರ ಅಳವಡಿಕೆಗೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತಿ ಕಚೇರಿಗಳಲ್ಲಿ ಹಸಿರು ಶಿಷ್ಠಾಚಾರ ಅಳವಡಿಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕುಡಿಯುವ ನೀರಿನಿಂದ ಹಿಡಿದು ವಾತಾವರಣ ಸಹ ಕಲುಶಿತವಾಗುತ್ತಿದೆ. ಗ್ರಾಮ, ನಗರ ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ನಮ್ಮ ಕಛೇರಿಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಬಿಡಬೇಕು. ಬಳಕೆಯಾಗದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಹಸಿರು ಶಿಷ್ಠಾಚಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕಚೇರಿಗಳಲ್ಲಿ ಉತ್ತಮ ವಾತಾವರಣ ಇದ್ದರೆ ಮಾತ್ರ ಅಧಿಕಾರಿ ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಇಲ್ಲವಾದಲ್ಲಿ ಕೆಲಸ ಪ್ರಮಾಣ ಸಹ ಕಡಿಮೆಯಾಗುವದರ ಜೊತೆಗೆ ವಿವಿಧ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಪ್ರತಿ ಗ್ರಾಮಗಳಲ್ಲಿ ರಸ್ತೆ ಪಕ್ಕ ಹಾಗೂ ಮನೆಯ ಸುತ್ತ ಮುತ್ತಲು ಪ್ಲಸ್ಟಿಕ್ ರಾಶಿಯನ್ನು ಕಾಣುತ್ತಿದ್ದೇವೆ. ಅದನ್ನು ಕಡೆಗಣಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಹಸಿರು ರಾಯಬಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ರೀಚ್ ಸಂಸ್ಥೆಯ ಜಿ.ಎನ್.ಸಿಂಹ ಮಾತನಾಡಿ ಒಣಕಸ, ಹಸಿಕಸ, ಎಕ್ಟ್ರಾನಿಕ್ಸ್ ಕಸ, ಆಸ್ಪತ್ರೆ ಕಸ, ಹಾನಿಕಾರದಿಂದಾಗ ಕಸ ಹೀಗೆ ವಿವಿಧ ರೀತಿಯ ತ್ಯಾಜ್ಯಗಳಿವೆ. ಅವುಗಳನ್ನು ಬೇರ್ಪಡಿಸಿ ಮರು ಬಳಕೆಯಾಗುವಂತೆ ಮಾಡಬೇಕಿದೆ. ಸ್ವಚ್ಛ ಪರಿಸರ ನಿರ್ಮಿಸಬೇಕು. ಒಳ್ಳೇಯ ಅಬ್ಯಾಸ ಇಟ್ಟುಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಅವರು ಪಂಚಾಯತ ರಾಜ್ ಇಲಾಖೆ ಸುತ್ತೋಲೆ ಮೇರೆಗೆ ಕಚೇರಿಗಳಲ್ಲಿ ಹಸಿರು ಶಿಷ್ಠಾಚಾರ ಅಳವಡಿಕೆ ಅನುಷ್ಠಾನಗೊಳಿಸಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಇಲಾಖೆಯ ಕಚೇರಿಗಳಲ್ಲಿ ಪ್ಲಾಸ್ಟಿಕ್, ಬಾಟಲ್, ಕ್ಯಾರಿಬ್ಯಾಗ ಬಳಕೆ ಮಾಡಬಾರದು. ಊಟ ಮಾಡಿದ ನಂತರ ವೆಸ್ಟ್‍ನ್ನು ಎನ್ನಂದರಲ್ಲಿ ಹಾಕುವದನ್ನು ತಡೆಯಲು ಕ್ರಮವಹಿಸಬೇಕು. ಇದಕ್ಕಾಗಿ ಜಿ.ಪಂ ಪ್ರಭಾರಿ ಯೋಜನಾ ನಿರ್ದೇಶಕ ಎಸ್.ಎಂ.ಕಾಂಬಳೆ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಇವರನ್ನು ಹಸಿರು ರಾಯಭಾರಿಂಗಳನ್ನಾಗಿ ನೇಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಸಿರು ಶಿಷ್ಠಾಚಾರದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.