ಕಕರಸಾ ನಿಗಮದ ತಂಡ ಸಾಧನೆ

Nigama
Published on

ಕಲಬುರಗಿ: ಅಸೋಸಿಯೇಶನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್‌ಟೇಕಿಂಗ್ ವತಿಯಿಂದ ಅಹಮದಾಬಾದ್‌ನಲ್ಲಿ ಇತ್ತೀಚಿಗೆ ಜರುಗಿದ ರಾಷ್ಟçಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ತಂಡ ಭಾಗವಹಿಸಿ ತೃತೀಯ ರನ್ನರ್‌ಅಪ್ ಸ್ಥಾನ ಪಡೆದಿದೆ.

ಈ ನಿಮಿತ್ತ ಕಲಬುರಗಿ ನಿಗಮದ ಕೇಂದ್ರ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮಾತನಾಡಿ, ರಾಷ್ಟçಮಟ್ಟದ ಸಾರಿಗೆ ನಿಗಮಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ನಮ್ಮ ತಂಡ ತೃತೀಯ ರನ್ನರ್‌ಅಪ್ ಸಾಧನೆ ಮೂಲಕ ನಿಗಮಕ್ಕೆ ಕೀರ್ತಿ ತಂದಿದೆ. ಇದಕ್ಕಾಗಿ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಈ ವಾಲಿಬಾಲ್ ತಂಡದ ವ್ಯವಸ್ಥಾಪಕರಾಗಿ ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಮಹಿಪಾಲ ಬೇಗಾರ್ ಹಾಗೂ ಉಪ ವ್ಯವಸ್ಥಾಪಕರಾಗಿ ನಿಗಮದ ಕೇಂದ್ರ ಕಛೇರಿಯಲ್ಲಿನ ಸಿಬ್ಬಂದಿ ಮೇಲ್ವಿಚಾರಕ ನಾಗರಾಜ ಮಠ್ ಕಾರ್ಯನಿರ್ವಹಿಸಿದ್ದಾರೆ. ತಂಡದ ತರಬೇತಿದಾರ ಅಮೀರ್ ಅಲಿಖಾನ್ ಸೂಕ್ತ ತರಬೇತಿ ನೀಡಿದ್ದಾರೆ.

ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಹೆಚ್.ಸಂತೋಷಕುಮಾರ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆಡಳಿತ ಸಲಹೆಗಾರ ಪಿ.ಎಸ್. ಬಸವರಾಜ, ಸಿಬ್ಬಂದಿ ಮುಖ್ಯ ವ್ಯವಸ್ಥಾಪಕ ಕೆ.ಎಂ.ಅಶ್ರಫ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ಪ್ರಭುಲಿಂಗ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net