

ಕಲಬುರಗಿ: ಸಂವಿಧಾನದ ವಿಧಿ ೩೭೧ (ಜೆ) ಜಾರಿಯ ದಶಮಾನೋತ್ಸವದ ವೇಳೆ ಸರ್ಕಾರವೂ ಸೆ.೧೭ರಂದು ಸಂಪುಟ ಸಭೆಗೆ ನಿರ್ಧರಿಸಿದ್ದು, ಸ್ವಾಗತಾರ್ಹ. ಆದರೆ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಸಮಸ್ಯೆ, ಬೇಡಿಕೆ ಕುರಿತು ರಚನಾತ್ಮಕ ವಿಷಯಗಳಿಗೆ ಸ್ಪಂದನೆ ದೊರೆಯಲಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.
371 (ಜೆ) ಪ್ರತ್ಯೇಕ ಸಚಿವಾಲಯ ಸೃಜನೆ, ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪನೆ, ೩೦ ನೆನೆಗುದಿಗೆ ಬಿದ್ದಿರುವ ಅಂಶ ಅನುಷ್ಠಾನ ಮಾಡಬೇಕು, ಐದು ವರ್ಷದ ಕ್ರಿಯಾ ಯೋಜನೆ ರಚಿಸಿ, ಕಾಲಮಿತಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಂಜುAಡಪ್ಪ ವರದಿ ಮಾನದಂಡವಾಗಿ ಇಟ್ಟು ಕಲ್ಯಾಣ ಕರ್ನಾಟಕದ ಒಂದು ಗ್ರಾಮ ಪಂಚಾಯಿತಿ ಘಟಕ ಮಾಡಿ ಸೌಕರ್ಯ ಕಲ್ಪಿಸಿ, ವೈಜ್ಞಾನಿಕ ರೀತಿ ವರದಿ ಸಿದ್ಧಪಡಿಸಿ, ಅದರ ಆಧಾರದಂತೆ ಕೆಕೆಆರ್‌ಡಿಬಿಯ ಕ್ರಿಯಾ ಯೋಜನೆ ರಚಿಸಬೇಕು, ಕೇಂದ್ರ ಸರ್ಕಾರದಿಂದ ೧೦ ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಕೆಕೆಆರ್‌ಡಿಬಿ ನಿಗಾವಹಿಸಲು ಮೇಲ್ವಿಚಾರಣೆ, ಮೌಲ್ಯಮಾಪನ, ಜಾಗೃತ ದಳ ರಚಿಸಬೇಕು, ಗುಳೆ ತಪ್ಪಿಸಲು ಕೃಷಿ, ಕೃಷಿಯೇತರ ಉದ್ಯೋಗ ಸೃಷ್ಟಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಡಿ ಸೇರಿಸಬೇಕು, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು, ಕಕದ ಬೃಹತ್ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳು ಕೃಷ್ಣಾ ಭಾಗ್ಯ ಜಲನಿಗಮದ ವ್ಯಾಪ್ತಿಗೆ ಸೇರಿಸಬೇಕು, ಬ್ರಿಡ್ಜ್-ಕಂ-ಬ್ಯಾರೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ನೀರಿನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಪ್ರೊ.ಆರ್.ಕೆ.ಹುಡಗಿ, ಪ್ರೊ.ಬಸವರಾಜ ಕುಮನೂರ, ಡಾ.ಮಾಜಿದ್ ದಾಗಿ, ಮನೀಷ ಜಾಜು, ಡಾ.ಗಾಂಧೀಜಿ ಮೋಳಖೆರೆ, ಸುನೀಲ ಕುಲಕರ್ಣಿ, ಅಶೋಕ ಗುರುಜಿ ಅಬ್ದುಲ ರಹೀಂ, ಅಸ್ಲಂ ಚೌಂಗೆ ಇತರರಿದ್ದರು.
ಪ್ರತ್ಯೇಕ ಕೃಷಿ ಮತ್ತು ಕೈಗರಿಕೆ ನೀತಿ ರೂಪಿಸಬೇಕು, ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಮಾಡಬೇಕು, ಕಕ ಪ್ರವಾಸಿ ತಾಣಗಳಿಗೆ ಒಂದೇ ಸರ್ಕ್ಯೂಟ್ ಮಾಡಬೇಕು, ಕಲಬುರಗಿ ಎರಡನೇ ವರ್ತುಲ ರಸ್ತೆ, ಬೀದರ್, ಬೆಂಗಳೂರು ಎಕನಾಮಿಕ್ ಕಾರಿಡಾರಗೆ ಒತ್ತು ನೀಡಬೇಕು, ಮಹಾನಗರದಲ್ಲಿ ನವನಗರ ನಿರ್ಮಿಸಿ ಉದ್ಯೋಗ ಸೃಷ್ಟಿಸಬೇಕು.
| ಲಕ್ಷ್ಮಣ ದಸ್ತಿ, ಅಧ್ಯಕ್ಷ
ಕಕ ಹೋರಾಟ ಸಮಿತಿ
ಹಸಿರು ಕಾರಿಡಾರ್ ನಿರ್ಮಿಸಿ: ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಂಪುಟ ಸಭೆಯಿಂದ ಒತ್ತಡ ತರುವುದು, ಬಸವಾದಿ ಶರಣರ ಕೇಂದ್ರ ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರ ಘೋಷಿಸಬೇಕು, ಸೇಡಂನ್ನು ರಾಷ್ಟ್ರಕೂಟ ಜಿಲ್ಲೆ ಎಂದು ಘೋಷಿಸಬೇಕು, ಮೈಸೂರು ಉತ್ಸವ ಮಾದರಿ ಕಕ ಉತ್ಸವ ಆಚರಿಸಬೇಕು, ತೊಗರಿ ಮಂಡಳಿಗೆ ಬಲಿಷ್ಠ ಸ್ವರೂಪ ನೀಡಬೇಕು, ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹಧನ ನೀಡಬೇಕು, ಹಸಿರು ಕಾರಿಡಾರ್ ನಿರ್ಮಾಣಕ್ಕೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ದಸ್ತಿ ಆಗ್ರಹಿಸಿದರು.