ಕಂದಕಕ್ಕೆ ಕಾರು ಉರುಳಿ 6 ಜನರಿಗೆ ಗಾಯ

car accident bnk
:ಕಂದಕಕ್ಕೆ ಉರುಳಿ ಬಿದ್ದ ಕಾರು.
Published on

ಬಣಕಲ್: ಚಾರ್ಮಾಡಿ ಘಾಟ್‌ನ ಮಲಯಮಾರುತ ಅರಣ್ಯ ಅತಿಥಿಗೃಹದ ಬಳಿಯ ಕಂದಕಕ್ಕೆ ಸೋಮವಾರ ಕಾರು ಉರುಳಿ 6 ಜನರು ಗಾಯಗೊಂಡಿದ್ದಾರೆ.
ಕಾರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಚಾರ್ಮಾಡಿ ಘಾಟ್‌ನ ಮಲಯ ಮಾರುತದ ಬಳಿ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ 20 ಅಡಿಯ ಸೇತುವೆಯ ಕೆಳಭಾಗಕ್ಕೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಅಲ್ಪಸ್ವಲ್ಪ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net