

ಬಾಗಲಕೋಟೆ: ವೃತ್ತಿಯ ಜೊತೆಗೆ ಪ್ರವೃತ್ತಿಯ ಮೇಲಿನ ಆಸಕ್ತಿ ಬಹುದೊಡ್ಡ ಎತ್ತರಕ್ಕೆ ತಂದು ನಿಲ್ಲಿಸಿದೆ. ಕಂಚಿನ ಕಠದ ಕಲಾವಿದನಿಗೆ ಕನ್ನಡಾಂಬೆ ಮನ್ನಣೆ ನೀಡಿದ್ದಾಳೆ...!!
ಮೂರು ದಶಕಗಳ ಹವ್ಯಾಸಿ ರಂಗಭೂಮಿ ಸೇವೆಗೆ ಜಿಲ್ಲೆಯ ಇಳಕಲ್ಲಿನ ಸ್ನೇಹ ರಂಗ ತಂಡದ ಕಲಾವಿದ ಹನುಮಾನದಾಸ ವಲ್ಲಭದಾಸ ಪವಾರ(ಢಗಳ ಚಂದ) ೨೦೨೪ ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಳಕಲ್ಲ ನಗರದ ನಿವಾಸಿಯಾಗಿರುವ ಢಗಳ ಚಂದ ೧೬೯೪ ಜನವರಿ ೨೦ ರಂದು ಜನಿಸಿದ್ದಾರೆ. ಜೀವನ ನಿರ್ವಹಣೆಗಾಗಿ ಇಲ್ಲಿಯ ಸಹಕಾರಿ ಬ್ಯಾಂಕ್ ಒಂದರಲ್ಲಿ ಪಿಗ್ಮಿ ಏಜೆಂಟನಾಗಿ ಕೆಲಸ ಮಾಡುತ್ತಲೇ ಕಾಲೇಜು ದಿನಗಳಿಂದ ಈವರೆಗೆ ೩೫ ವರ್ಷಗಳ ಕಾಲ ರಂಗಭೂಮಿ, ಧಾರವಾಹಿ ಹಾಗೂ ಸಿನೆಮಾದಲ್ಲಿ ನಟಿಸಿ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿz್ದÁರೆ.
ನಾಲ್ಕು ದಶಕಗಳ ಹಿಂದೆ ನಗರದ ಸಮಾನ ಮನಸ್ಕರು ಸಾಹಿತ್ಯ ಹಾಗೂ ರಂಗಭೂಮಿಯ ಚಟುವಟಿಕೆಗಳಿಗಾಗಿ ಕಟ್ಟಿದ 'ಸ್ನೇಹರಂಗ' ಹವ್ಯಾಸಿ ರಂಗತಂಡ ಢಗಳಚಂದ ಅವರ ಪ್ರತಿಭೆಯನ್ನು ಗುರುತಿಸಿ, ಪೋಷಿಸಿದೆ. ಯಾವಾಗಲೂ ಸವಾಲಿನ ಪಾತ್ರವನ್ನು ಕೇಳಿ ಪಡೆದು, ಪಾತ್ರವೇ ತಾನಾಗಿ ಅಭಿನಯಿಸಿ ಕಲಾಸಕ್ತರ ಮನಸೂರೆಗೊಂಡಿz್ದÁರೆ.
ಮಾರವಾಡಿ ಸಮಾಜದ ಬಡ ಕುಟುಂಬದಲ್ಲಿ ಜನಿಸಿದ ಢಗಳಚಂದ ಅವರಿಗೆ ವ್ಯಾಪಾರಕ್ಕಿಂತ ರಂಗ ಕಲೆ ಒಲಿದಿರುವುದು ವಿಶೇಷ. ಪಿಯುಸಿ ಓದುವಾಗ ಜಿ¯್ಲÁ ಮಟ್ಟದ ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ಪಡೆದ ಪ್ರಥಮ ಬಹುಮಾನ ನಟನಾಗುವ ಆತ್ಮವಿಶ್ವಾಸ ನೀಡಿತು. ನಾಟಕಗಳಲ್ಲಿ ನಟಿಸಲು ಆರಂಭಿಸಿದ ಮೇಲೆಯೇ ಅವರಿಗೆ ತಮ್ಮ ಕಂಠದ ಸಾಮರ್ಥ್ಯ ತಿಳಿದದ್ದು. ಮುಂದೆ ಪ್ರತಿ ನಾಟಕದಲ್ಲೂ ರಂಗ ಗೀತೆಗಳನ್ನು ಹಾಡಿ ಗಾಯಕ ಎಂದೂ ಗುರುತಿಸಲ್ಪಟ್ಟರು. ರಾಜಕಾರಣಿಗಳ ಹಾಗೂ ಸಿನೆಮಾ ನಟರನ್ನು ಮಿಮಿಕ್ರಿ ಮಾಡಿ ಗಮನ ಸೆಳೆದರು.
ರಂಗಭೂಮಿಗೂ ಸೈ..ಸಿನಿಮಾ ರಂಗಕ್ಕೂ ಜೈ..!
೧೯೮೦ರಿಂದ ಢಗಳಚಂದ ಅವರು ಸ್ನೇಹರಂಗದ ೩೦ ನಾಟಕಗಳ ೨೦೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿz್ದÁರೆ. ಪ್ರೊ.ಕೆ.ಎ. ಬನ್ನಟ್ಟಿ ಅವರ 'ಕಡ್ಲಿಮಟ್ಟಿ ಕಾಶೀಬಾಯಿ', ಪಿ.ಗಂಗಾಧರಸ್ವಾಮಿ ನಿರ್ದೇಶನದಲ್ಲಿ ಗೋಪಾಲ ವಾಜಪೇಯಿ ಅವರ 'ಹಾವು ತುಳಿದೇನ ಮಾನಿನಿ', ಅಶೋಕ ಬಾದರದಿನ್ನಿ ನಿರ್ದೇಶನದ ಗಿರೀಶ ಕಾರ್ನಾಡರ ತುಘಲಕ್, ಜಯತೀರ್ಥ ಜೋಶಿ ನಿರ್ದೇಶನದ ಜಡಭರತರ `ಸತ್ತವರ ನೆರಳು', ವಿ.ಕೆ.ವಂಶಾಕೃತಮಠ ನಿರ್ದೇಶನದ ಚಂದ್ರಶೇಖರ ಕಂಬಾರರ `ಜೋಕುಮಾರಸ್ವಾಮಿ', ಹೂಲಿ ಶೇಖರರ `ಹಾವು ಹರಿದಾಡತಾವ' ಧ್ರುವರಾಜ ದೇಶಪಾಂಡೆ ನಿರ್ದೇಶನದ ಪ್ರೊ.ಕೆ.ಎ.ಬನ್ನಟ್ಟಿ ಅವರ `ಒಂದು ವಾಡೆ ಕಥೆ' ಅಶೋಕ ಬಾದರದಿನ್ನಿ ನಿರ್ದೇಶಕನದ ಕಂಬಾರರ 'ಸಿರಿಸಂಪಿಗೆ', ಕಾರ್ನಾಡರ `ನಾಗಮಂಡಲ', ಮಹಾಂತೇಶ ಗಜೇಂದ್ರಗಡ ನಿರ್ದೇಶನದ ಪಿ.ಬಿ. ಧುತ್ತರಗಿ ಅವರ 'ಹಗರಣ', 'ಶೂದ್ರವಧೆ', 'ಖುರ್ಚಿ' ಬೀದಿ ನಾಟಕಗಳಲ್ಲಿ ನಟಿಸಿz್ದÁರೆ. ತಾಯಿ ಸಾಹೇಬ, ಗಂಗವ್ವ ಗಂಗಾಮಾಯಿ, ಸಿಂಗಾರೆವ್ವ ಮತ್ತು ಅರಮನೆ, -Àಸ್ಟ ರ‍್ಯಾಂಕ್ ರಾಜು, ಕೆಂಗುಲಾಬಿ, ಜೈ ಹನುಮಾನ ಸಿನೆಮಾಗಳಲ್ಲಿ ೧೦ ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿz್ದÁರೆ.
ರಾಜ್ಯ ಮಾತ್ರವಲ್ಲದೇ ಗೋವಾ, ಚಂಡೀಗಢ, ದೆಹಲಿ, ಸೊ¯್ಲÁಪೂರ ಮೊದಲಾದ ಕಡೆಗಳಲ್ಲಿ ನಡೆದ ಸ್ನೇಹರಂಗದ ನಾಟಕಗಳಲ್ಲಿ ನಟಿಸಿz್ದÁರೆ. ಅವರಿಗೆ ಜಿ¯್ಲÁ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಅವರನ್ನು ಅರಿಸಿಕೊಂಡು ಬಂದಿವೆ.