ಔಷಧವನ್ನೂ ಬಿಡದ ಕಳ್ಳಿಯರು!!

IMG-20220819-WA0055.jpg
Published on

ಭಟ್ಕಳ: ಪಟ್ಟಣದ ಕಟ್ಟಿಗೆ ಡಿಪೊ ಸಮೀಪದ ಅಪೋಲೊ ಮೆಡಿಕಲ್  ಮಳಿಗೆಯಲ್ಲಿ ಮೂವರು ಬುರ್ಕಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿದ್ದು. ಕಳ್ಳತನ ಮಾಡಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಗಸ್ಟ್ ೩.ರ ಮಧ್ಯಾಹ್ನ ೨ ಗಂಟೆ ಸುಮಾರಿಗೆ  ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಕಾಧಾರಿ ಮಹಿಳೆಯರು ಔಷಧ ಖರೀದಿಸುವ ನೆಪದಲ್ಲಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ.

ಮೆಡಿಕಲ್ ಸಿಬ್ಬಂದಿ ಬೇರೆ ಗ್ರಾಹಕರೊಂದಿಗೆ ಬ್ಯುಸಿ ಇರುವಂತೆ ಅವರನ್ನು ಯಾಮಾರಿಸಿ ಬುರ್ಖಾದಾರಿಗಳು ಕೈಚಳಕ ತೋರಿಸಿದ್ದಾರೆ. ಔಷಧ ಅಂಗಡಿಯಲ್ಲಿದ್ದ ಕೆಲ ವಸ್ತುಗಳನ್ನು ತಮ್ಮ ಬುರ್ಖಾದಲ್ಲಿ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಪ್ರತಿ ಬಾರಿಯೂ ಆಡಿಟ್ ನಡೆದಾಗ ಸಾಮಗ್ರಿಗಳ ಕೊರತೆ ಎದುರಾಗುತಿತ್ತು. ಸಿಬ್ಬಂದಿಗಳೆ ತಮ್ಮ ಕೈಯಿಂದ ಹಣ ತುಂಬುತಿದ್ದರು. ಈ ಬಾರಿಯೂ ಕೊರತೆ ಕಂಡು ಬಂದಿದ್ದು ಮಳಿಗೆ ಸಿಬ್ಬಂದಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ತಾಲೂಕಿನಾದ್ಯಂತ ಈ ಕಳ್ಳತನದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net