ಔಖಳಿ ಮಳೆಗೆ ಸರ‍್ಯನಗರಿ ಥಂಡಾ

Rain
Published on

ಕಲಬುರಗಿ: ಸರ‍್ಯನಗರಿ ಕಲಬುರಗಿಯಲ್ಲಿ ಮರ‍್ನಾಲ್ಕು ದಿನಗಳಿಂದ ಬಿಸಿಲ ಪ್ರಮಾಣ ಹೆಚ್ಚಿದ್ದರಿಂದ ಜನ ಬಸವಳಿದಿದ್ದರು. ಆದರೆ ಬುಧವಾರ ಸಂಜೆ ರ‍್ಧ ಗಂಟೆಗೂ ಹೆಚ್ಚು ಗುಡುಗು&ಮಿಂಚು ಹಾಗೂ ಸಿಡಿಲಿನ ರ‍್ಭಟದೊಂದಿಗೆ ಸುರಿದ ಮಳೆಯಿಂದಾಗಿ ತಂಪು ವಾತಾವರಣ ನರ‍್ಮಾಣವಾಗಿದೆ. ಬೇಸಿಗೆಯಲ್ಲಿ ಬಹುತೇಕ ಔಖಳಿ ಮಳೆ ಸುರಿಯುತ್ತದೆ. ಸುಮಾರು ದಿನಗಳಿಂದ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೊರಗಡೆ ತಿರುಗಾಡುವುದೇ ದುಸ್ತರವಾಗಿದೆ. ಈ ಮಧ್ಯೆ ಸುರಿದ ಮಳೆ ಒಂದಿಷ್ಟು ನೆಮ್ಮದಿ ನೀಡಿದೆ. ಪ್ರಖರ ಬಿಸಿಲಿನ ತಾಪದಿಂದ ಕಾದು ಕೆಂಡವಾಗಿದ್ದ ಭೂಮಿಯನ್ನು ಮಳೆ ಥಂಡಾ ಹೊಡೆಸಿದೆ. ನಿತ್ಯ ಮಿತಿಮೀರಿದ ಬಿಸಿಲಲ್ಲಿ ತಿರುಗಿ ಸುಸ್ತಾಗಿದ್ದ ಜನ ಇಂದು ಸುರಿದ ಮಳೆಯಲ್ಲೇ ಸಂಚರಿಸಿದ್ದು ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net